Wednesday, April 23, 2025
spot_imgspot_img
spot_imgspot_img

ಬೆಳ್ಳಣ್ ಶಾಲೆಯ ಬಾಗಿಲು ಮುರಿದು 1,50 ಲಕ್ಷ ಹಣ ಕಳ್ಳತನ

- Advertisement -
- Advertisement -

ಕಾರ್ಕಳ : ಶಾಲೆಯ ಬಾಗಿಲು ಮರಿದು 1.50 ಲಕ್ಷ ರೂ. ನಗದು ಕಳವುಗೈದ ಘಟನೆ ಬೆಳ್ಳಣ್ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫೆ. 21ರ ರಾತ್ರಿ ಸಂಭವಿಸಿದೆ. ಶಾಲೆಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾ ಡ್ಯಾಮೇಜ್ ಮಾಡಿ, ಶಾಲಾ ಕಚೇರಿಯ ಬಾಗಿಲಿನ ಬೀಗ ಮುರಿದು ಒಳಗಿದ್ದ ಮೇಜಿನ ಡ್ರಾವರನ್ನು ಒಡೆದು ಅದರಲ್ಲಿದ್ದ 1,50,000 ರೂ. ನಗದು ಹಾಗೂ 3 ಡಿವಿಯರ್‌ಗಳನ್ನು ಕಳ್ಳತನ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಎಎಸ್‌ಪಿ ಡಾ. ಹರ್ಷಪ್ರಿಯಂವದ, ವೃತ್ತ ನಿರೀಕ್ಷಕ ಮಂಜಪ್ಪ ಡಿ. ಆ‌ರ್., ಕಾರ್ಕಳ ಗ್ರಾಮಾಂತರ ಪೊಲೀಸ್‌ ಉಪನಿರೀಕ್ಷಕರಾದ ದಿಲೀಪ್ ಮತ್ತು ಸುಂದರ್, ಬೆರಳಚ್ಚು ತಂತ್ರಜ್ಞರು, ಶ್ವಾನದಳ ಮತ್ತು ವಿಧಿ ವಿಜ್ಞಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!