- Advertisement -
- Advertisement -


ವಿಟ್ಲ: ವಿಟ್ಲ-ಕನ್ಯಾನ ರಸ್ತೆಯ ಬೈರಿಕಟ್ಟೆ ಜಂಕ್ಷನ್ ಬಳಿಯ ಸಲೀಂ ಎಂಬವರ ಮನೆಗೆ ನುಗ್ಗಿದ ಕಳ್ಳರ ಹಾಡಹಗಲೇ ಮನೆಯವರಿಲ್ಲದ ಸಂದರ್ಭ ಬಾಗಿಲು ಮುರಿದು ಒಳಹೊಕ್ಕ ಹಣ, ಚಿನ್ನಾಭರಣಕ್ಕಾಗಿ ಕಪಾಟು ಒಡೆದು ಜಾಲಾಡಿದ ಕಳ್ಳತನ ನಡೆದಿದೆ.
ಮನೆಯವರೆಲ್ಲಾ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದಾಗ ಕಳ್ಳರ ಚಿನ್ನಾಭರಣಗಳಿಗಾಗಿ ಸಾಕಷ್ಟು ಜಾಲಾಡಿದ ಕಳ್ಳರಿಗೆ ಮೂರು ಸಾವಿರ ನಗದು ಕಳ್ಳತನವಾಗಿದೆ.ಬೈರಿಕಟ್ಟೆ ಕಾಡುಮನೆ ಅಬ್ದುಲ್ ಸಲೀಂ ಸಂಬಂಧಿಕರ ಮನೆಯಲ್ಲಿ ಚಿನ್ನಾಭರಣ ಇಟ್ಟು ಹೋಗಿದ್ದರಿಂದ ಕಳ್ಳರ ಪಾಲಾಗದೇ ಬಚಾವಾಗಿದೆ.ಮೂರು ಬಾಗಿಲು ಮುರಿದಿದ್ದಾರೆ.ಚಿನ್ನಾಭರಣಕ್ಕಾಗಿ ಮೂರು ಕಪಾಟುಗಳನ್ನು ಮುರಿದಿದ್ದಾರೆ.ಸುಮಾರು ಹತ್ತು ಸಾವಿರ ನಗದು ಹಣ ಮತ್ತು ಸ್ವಲ್ಪ ಚಿನ್ನಾಭರಣ ಕಳ್ಳರ ಪಾಲಾಗಿದೆ.ಸುಮಯ್ಯ ಎಂಬವರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
- Advertisement -