ಮಂಗಳೂರು: ಈದ್‌ಮಿಲಾದ್ ಮೆರವಣಿಗೆ ವೇಳೆ ಉಳ್ಳಾಲ ಹಾಗೂ ಶಿವಮೊಗ್ಗದಲ್ಲಿ ನಡೆದ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆ ತೀವ್ರವಾಗಿ ಖಂಡಿಸಿದೆ.
ಈದ್ ಮಿಲಾದ್ ಮೆರವಣಿಗೆ ನೆಪದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿ ಹುಟ್ಟು ಹಾಕಿದ್ದ ಉಳ್ಳಾಲದ ವೀರ ರಾಣಿ ಅಬ್ಬಕ ವೃತ್ತದ ಮೇಲೆ ಬೂಟ್,ಚಪ್ಪಲಿ ಧರಿಸಿ ವೃತ್ತದ ಮೇಲೆ ಹತ್ತಿ ಹಸಿರು ಬಾವುಟ ಬೀಸಿ, ರಸ್ತೆ ಬಂದ್ ಮಾಡಿ ಕರ್ಕಶ ಹಾರ್ನ್ ಮಾಡಿ ಪೋಲಿಸ್ ಠಾಣೆಯ ಎದುರೇ ಪುಂಡಾಟ ಮೆರೆದಿದ್ದ ದೂರದ ಬೆಳ್ತಂಗಡಿ, ಬಂಟ್ವಾಳ, ವಿಟ್ಲದ ಮದಕ, ಕೊಣಾಜೆ, ಮಂಜನಾಡಿ ಮತ್ತು ಸ್ಥಳೀಯ ಕೆಲವು ಮುಸ್ಲಿಂ ಯುವಕರಿಗೆ ವಿಡಿಯೋ ಅಧಾರಿಸಿ ಪೊಲೀಸ್ ಇಲಾಖೆ ಜನರ ಆಕ್ರೋಶದ ನಂತರ ನೋಟಿಸ್ ನೀಡಿದೆ ಈ ಘಟನೆಯನ್ನು ಮತ್ತು ಶಿವಮೊಗ್ಗದ ಜಿಲ್ಲೆ ಕೆಲವು ಕಡೆ ಪುಂಡಾಟ ಮೆರೆದು ಅಮಾಯಕ ಹಿಂದೂಗಳನ್ನು ಗುರಿಯಾಗಿಸಿ ಹಲ್ಲೆ, ಕೊಲೆಯತ್ನ ನಡೆಸಿರುವ ಘಟನೆಯನ್ನು ಹಿಂದು ಜಾಗರಣ ವೇದಿಕೆ ಮಂಗಳೂರು ಗ್ರಾಮಂತರ ಜಿಲ್ಲೆ ಉಗ್ರವಾಗಿ ಖಂಡಿಸುತ್ತದೆ ಮತ್ತು ಪುಂಡಾಟ ಮೆರೆದ ಮುಸ್ಲಿಂ ಯುವಕರನ್ನು ಕೂಡಲೇ ಬಂಧಿಸಬೇಕಾಗಿ ಶಿವಮೊಗ್ಗ, ಮಂಗಳೂರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಆಗ್ರಹಿಸಿದೆ.