- Advertisement -
- Advertisement -
ಕಾಸರಗೋಡು: ತಮಿಳುನಾಡಿನ ಕೊಯಮುತ್ತೂರುನಲ್ಲಿ ನಡೆದ ಅಪಘಾತದಲ್ಲಿ ಸೀತಾಂಗೋಳಿ ಕಟ್ಟತ್ತ ಡ್ಕ ನಿವಾಸಿ ವೈದ್ಯಕೀಯ ವಿದ್ಯಾರ್ಥಿ ಮೃತಪಟ್ಟ ಘಟನೆ ವರದಿಯಾಗಿದೆ.
ಕಟ್ಟತ್ತಡ್ಕ ಎಕೆಜಿ ನಗರದ ಮುಹಮ್ಮದ್ ರಾಶಿದ್ (20) ಮೃತ ಪಟ್ಟ ವಿದ್ಯಾರ್ಥಿ.
ಕೊಯಮುತ್ತೂರುನಲ್ಲಿ ಎರಡನೇ ವರ್ಷದ ಎಂ ಬಿ ಬಿ ಎಸ್ ವ್ಯಾಸಂಗ ಮಾಡುತ್ತಿದ್ದ ರಾಶಿದ್ ರಾತ್ರಿ ಸಮಯದಲ್ಲಿ ಆಹಾರ ಸೇವಿಸಲು ಹೋಟೆಲ್ ಗೆ ರಸ್ತೆ ದಾಟುತ್ತಿದ್ದಾಗ ಅತೀ ವೇಗದಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯ ಗೊಂಡ ರಾಶೀದ್ ನನ್ನು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.
ಅಪಘಾತದ ಸುದ್ದಿ ತಿಳಿದು ಸಂಬಂಧಿಕರು ಕೊಯಮುತ್ತೂರಿಗೆ ತೆರಳಿದ್ದಾರೆ . ರಜೆ ಯಲ್ಲಿ ಊರಿಗೆ ಬಂದಿದ್ದ ರಾಶಿದ್ ಒಂದು ವಾರ ದ ಹಿಂದೆ ಕೊಯಮುತ್ತೂರಿಗೆ ಮರಳಿದ್ದರು ಎಂದು ತಿಳಿದುಬಂದಿದೆ.
- Advertisement -