Friday, June 5, 2026
spot_imgspot_img
spot_imgspot_img

ಗ್ಯಾಸ್ ಗೀಸರ್ ಸೋರಿಕೆಯಿಂದ ವಿದ್ಯಾರ್ಥಿನಿ ಮೃತ್ಯು…!

- Advertisement -
- Advertisement -

ವಿದ್ಯಾರ್ಥಿನಿಯೊಬ್ಬಳು ಸ್ನಾನ ಮಾಡಲು ಸ್ನಾನಗೃಹಕ್ಕೆ ತೆರಳಿದ್ದಾಗ ಗೀಸರ್ ನಿಂದ ಗ್ಯಾಸ್ ಸೋರಿಕೆಯಾಗಿ ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆಯೊಂದು ಉತ್ತರ ಪ್ರದೇಶದ ಬದೌನ್‌ನ ಬಿಸೌಲಿ ಪಟ್ಟಣದಲ್ಲಿ ನಡೆದಿದೆ.

ಮೃತರನ್ನು ವಿದ್ಯಾರ್ಥಿನಿ ಮೇಘಾ ಶರ್ಮಾ 11ನೇ ತರಗತಿ ಎಂದು ಗುರುತಿಸಲಾಗಿದೆ. ಸುಮಾರು ಎರಡು ಗಂಟೆಯಾದರೂ ಆಕೆ ಬಾತ್ ರೂಂನಿಂದ ಹೊರಗೆ ಬಾರದೇ ಇದ್ದಾಗ ಕುಟುಂಬಸ್ಥರಿಗೆ ಅನುಮಾನ ಬಂದು, ಬಾತ್ ರೂಮ್ ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಕುಟುಂಬಸ್ಥರು ಬಾತ್ ರೂಂ ಬಾಗಿಲು ಒಡೆದಿದ್ದಾರೆ. ಒಳಗೆ ಮೇಘಾ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಕೂಡಲೇ ಆತನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.

ಮೃತ ಹುಡುಗಿಯ ಕಿರಿಯ ಸಹೋದರ ಸಕ್ಷಮ್ ಕೂಡ ಅದೇ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ. ಚಳಿಗಾಲದ ರಜೆಯ ಕಾರಣ, ಸಹೋದರರು ಮತ್ತು ಸಹೋದರಿಯರು ಡಿಸೆಂಬರ್ 30 ರಂದು ಬಿಸೌಲಿಗೆ ಬಂದಿದ್ದರು. ಭಾನುವಾರ ಮಧ್ಯಾಹ್ನ, ಮೇಘಾ ಸ್ನಾನ ಮಾಡಲೆಂದು ಹೋಗಿದ್ದು, ಗೀಸರ್ ಸ್ವಿಚ್ ಆನ್ ಮಾಡಿದ್ದಾಳೆ. ಇದ್ದಕ್ಕಿದ್ದಂತೆ ಗೀಸರ್‌ನಿಂದ ಗ್ಯಾಸ್ ಸೋರಿಕೆಯಾಗಿ ಸ್ವಲ್ಪ ಸಮಯದಲ್ಲಿ ಮೇಘಾ ಬಾತ್ರೂಮ್ ಒಳಗೆ ಉಸಿರುಗಟ್ಟಿ ಸಾವಿಗೀಡಾಗಿದ್ದಾಳೆ.

- Advertisement -

Related news

error: Content is protected !!