Wednesday, July 2, 2025
spot_imgspot_img
spot_imgspot_img

ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ‘ಪರಾಕ್ರಮ್​ ದಿವಸ್​’ ಎಂದು ಘೋಷಿಸಿದ ಕೇಂದ್ರ

- Advertisement -
- Advertisement -

ನವದೆಹಲಿ: ಜನವರಿ 23ರ ನೇತಾಜಿ ಸುಭಾಷ್​​ ಚಂದ್ರ ಬೋಸ್​ ಅವರ ಜನ್ಮದಿನವನ್ನ ಪರಾಕ್ರಮ ದಿನವನ್ನಾಗಿ ಆಚರಣೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ಬೋಸ್​ರ 125ನೇ ಹುಟ್ಟು ಹಬ್ಬದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು, ಕೇಂದ್ರ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳೆರಡು ಜನ್ಮದಿನವನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡಲಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 23ರಂದು ಕೊಲ್ಕತ್ತಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನೇತಾಜಿ ಯವರು ದೇಶಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸಲು ಸರ್ಕಾರ ಅವರ ಜನ್ಮದಿನವನ್ನು ಪರಾಕ್ರಮ್ ದಿವಸ್​ ಎಂದು ಆಚರಿಸಲು ತೀರ್ಮಾನಿಸಿದೆ ಎಂದು ಕೇಂದ್ರ ಸಚಿವಾಲಯ ಹೇಳಿದೆ.

ಸರ್ಕಾರದ ನಿರ್ಧಾರವನ್ನು ಫಾರ್ವರ್ಡ್​​ ಬ್ಲಾಕ್​ ಪಕ್ಷದ ಪಶ್ಚಿಮ ಬಂಗಾಳ ಕಾರ್ಯದರ್ಶಿ ನರೇನ್​ ಚಟರ್ಜಿ ವಿರೋಧ ಮಾಡಿದ್ದು, ಈಗಾಗಲೇ ದೇಶಾದ್ಯಂತ ನೇತಾಜಿ ಅವರ ಜನ್ಮದಿನವನ್ನು ದೇಶಪ್ರೇಮಿಗಳ ದಿನ ಎಂದು ಆಚರಣೆ ಮಾಡಲಾಗುತ್ತಿದೆ.

ಆದ್ದರಿಂದ ಸರ್ಕಾರ ಇದನ್ನೇ ಅಧಿಕೃತಗೊಳಿಸಿ ಮುಂದುವರಿಸಿಬೇಕು ಎಂದು ಹೇಳಿದ್ದಾರೆ. ಇತ್ತ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ನಿರ್ಧಾರ ಭಾರೀ ಚರ್ಚೆಗೆ ಕಾರಣವಾಗಿದೆ.

driving
- Advertisement -

Related news

error: Content is protected !!