- Advertisement -
- Advertisement -


ಸುಬ್ರಹ್ಮಣ್ಯ: ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ್ ಹೊರಟ್ಟಿಯವರು ತಮ್ಮ ಕುಟುಂಬದವರ ಜೊತೆ ಇಂದು (ಮಾ. 28) ನೇ ಶುಕ್ರವಾರ ದಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪೂಜಾ ಸೇವೆಗಾಗಿ ಭೇಟಿ ನೀಡಲಿದ್ದಾರೆ.
ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಬಸವರಾಜ್ ಹೊರಟ್ಟಿಯವರು ಕ್ಷೇತ್ರದಲ್ಲಿ ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಿನಿಮಾ ತಾರೆಯರು, ರಾಜಕರಣಿಗಳು ವಿವಿಧ ಪೂಜಾ ಸೇವೆ ಸಲ್ಲಿಸಲು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.
- Advertisement -








