Friday, April 26, 2024
spot_imgspot_img
spot_imgspot_img

ಪ್ರಧಾನಿ ಮೋದಿಯ ಹುಟ್ಟುಹಬ್ಬಕ್ಕೆ ಸಮುದ್ರ ಚಿಪ್ಪುಗಳನ್ನು ಬಳಸಿ ಮರಳು ಶಿಲ್ಪ ರಚಿಸಿದ ಸುದರ್ಶನ್ ಪಟ್ನಾಯಕ್!

- Advertisement -G L Acharya panikkar
- Advertisement -
driving

ಇಂದು ಪ್ರಧಾನಿ ನರೇಂದ್ರ ಮೋದಿ 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದೇಶಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಸಂದರ್ಭದಲ್ಲಿ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಒಡಿಶಾದ ಪುರಿ ಬೀಚ್​ನಲ್ಲಿ ಪ್ರಧಾನಿ ಮೋದಿಯವರ ಅದ್ಭುತವಾದ ಮರಳು ಶಿಲ್ಪ ರಚಿಸುವ ಮೂಲಕ ಶುಭಾಶಯ ಹೇಳಿದ್ದಾರೆ. ತಾವು ರಚಿಸಿದ ಶಿಲ್ಪದ ಚಿತ್ರವನ್ನು ಕಲಾವಿದ ಸುದರ್ಶನ್ ಪಟ್ನಾಯಕ್ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಮರಳು ಕಲೆಯಲ್ಲಿ 2035 ಸಮುದ್ರ ಚಿಪ್ಪುಗಳನ್ನು ಬಳಸಲಾಗಿದೆ. ಟ್ವೀಟ್​ನಲ್ಲಿ ಸುದರ್ಶನ್ ಪಟ್ನಾಯಕ್, ಗೌರವಾನ್ವಿತ ಪಧಾನಿ ನರೇಂದ್ರ ಮೋದಿಜಿ ಅವರಿಗೆ ಜನ್ಮ ದಿನದ ಶುಭಾಶಯಗಳು. ಪುರಿಯ ಜಗನ್ನಾಥ ದೇವರು ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನೀಡಲಿ. ಒಡಿಶಾ ಪುರಿ ಬೀಚ್​ನಲ್ಲಿ ನಾನು 2035 ಸಮುದ್ರ ಚಿಪ್ಪುಗಳನ್ನು ಬಳಸಿ ಸ್ಯಾಂಡ್ ಆರ್ಟ್ ರಚಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

- Advertisement -

Related news

error: Content is protected !!