Friday, June 5, 2026
spot_imgspot_img
spot_imgspot_img

ಮಂಗಳೂರು: ‘ಯಾವುದೇ ಪ್ರಕರಣಗಳ ಆರೋಪಿಗಳಿಗೆ ಆಶ್ರಯ ನೀಡಿದರೆ ಕಾನೂನು ಕ್ರಮ’- ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ

- Advertisement -
- Advertisement -

ಯಾವುದೇ ಪ್ರಕರಣಗಳ ಆರೋಪಿಗಳಿಗೆ ಯಾರೇ ಆದರೂ ಆಶ್ರಯ ನೀಡಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ನೂತನ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್‌ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಅಪರಾಧ ಪ್ರಕರಣ ಮಾಡಿದ ಬಳಿಕ ಆರೋಪಿಗಳಿಗೆ ಆಶ್ರಯ ನೀಡುವುದು, ಆರ್ಥಿಕ ಸಹಾಯ ಮಾಡುವುದು, ಆಹಾರ, ಫೋನ್, ವಾಹನ ಇತ್ಯಾದಿ ರೂಪದಲ್ಲಿ ಸಹಾಯ ನೀಡಿದರೆ ಅವರನ್ನೂ ಕೂಡ ಆರೋಪಿಗಳನ್ನಾಗಿ ಮಾಡಲಾಗುವು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.ಕೆಲವೊಂದು ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಪ್ರಕರಣದ ತನಿಖೆ ನಡೆಸಿದಾಗ ಕೃತ್ಯಕ್ಕೆ, ಆರೋಪಕ್ಕೆ ಸಹಕಾರ ನೀಡಿದ ವ್ಯಕ್ತಿ ಎಷ್ಟೇ ಪ್ರಭಾವಶಾಲಿಯಾದರೂ ಅವರನ್ನು ಬಂಧಿಸುತ್ತೇವೆ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

- Advertisement -

Related news

error: Content is protected !!