Friday, August 7, 2026
spot_imgspot_img
spot_imgspot_img

ಬೆಂಗಳೂರು: ಉದ್ಯಮಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು

- Advertisement -
- Advertisement -

ಬೆಂಗಳೂರು: ಉದ್ಯಮಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯನಗರದ ಉದ್ಯಮಿ ಕಲಾಲ್ ದತ್ತ(40) ಎಂದು ತಿಳಿದು ಬಂದಿದೆ.ಸೋಮವಾರ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಸಾಲದಿಂದ ಬೇಸತ್ತು ಬಡ್ಡಿ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಡೆತ್ ನೋಟ್ ನಲ್ಲಿ ಪತ್ನಿಗೆ ಕ್ಷಮೆ ಕೇಳಿದ್ದಾರೆ.ಘಟನಾ ಸ್ಥಳಕ್ಕೆ ಹುಳಿಮಾವು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.2016 ರಿಂದ ಮೃತ ಕಲಾಲ್ ದತ್ತ ಹಾಗೂ ಎಜಿ ಮರಿಸ್ವಾಮಿ ಎಂಬವರು ಸೇರಿಕೊಂಡು ಸಾಯಿ ಫೆಸಿಲಿಟಿ ಸರ್ವೀಸಸ್ ಕಂಪನಿ ನಡೆಸುತ್ತಿದ್ದರು. ಈ ಸದರ್ಭ ಮರಿಸ್ವಾಮಿ ಸುಮಾರು ನಾಲ್ಕು ಕೋಟಿ ಹಣ ಪಡೆದು ವಂಚನೆ ಮಾಡಿರುವುದಾಗಿ ಮೃತ ಉದ್ಯಮಿ ಕಲಾಲ್ ದತ್ತ ಪತ್ನಿ ಸಜಿನಿ ಅವರು ಹುಳಿಮಾವು ಠಾಣೆಯಲ್ಲಿ ದೂರು ನೀಡಿದ್ದಾರೆ.ಈ ಕುರಿತು ಹುಳಿಮಾವು ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!