- Advertisement -
- Advertisement -


ನೆಲಮಂಗಲ : ಬೆಂಗಳೂರು ಉತ್ತರ ತಾಲೂಕಿನ ನಾರಾಯಣಪ್ಪನಪಾಳ್ಯದಲ್ಲಿ ಯುವಕನೋರ್ವ ಹುಡುಗಿಯ ಪೋಷಕರು ದಪ್ಪವಾಗಿದ್ದಾನೆ ಎಂದು ನಿರಾಕರಿಸುತ್ತಿರುವ ಘಟನೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.ವೃತ್ತಿಯಲ್ಲಿ ಆಟೋ ಚಾಲಕ ವೆಂಕಟೇಶ್(29) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ.
ಗೋವಿಂದರಾಜು ಮತ್ತು ಮಂಗಳಮ್ಮ ದಂಪತಿ ಪುತ್ರ ವೆಂಕಟೇಶ್ ಮದುವೆಯಾಗಲು ಸುಮಾರು 15 ಹುಡುಗಿಯರನ್ನ ನೋಡಿದ್ದರು. ಎಲ್ಲಾ ಹುಡುಗಿ ಪೋಷಕರು ಹುಡುಗ ದಪ್ಪಗಿದ್ದಾನೆಂದು ನಿರಾಕರಿಸಿದ್ದರು ಎಂದು ತಿಳಿದು ಬಂದಿದೆ.
ಹುಡುಗಿ ಸಿಗುತ್ತಿಲ್ಲ ಮತ್ತು ದಪ್ಪವಾಗಿದ್ದಾರೆ ಎನ್ನುವ ಅವಮಾನದಿಂದ ನೊಂದು ತನ್ನ ಬಾಡಿಗೆ ಮನೆಯಲ್ಲಿ ವೆಂಕಟೇಶ್ ನೇಣಿಗೆ ಶರಣಾಗಿದ್ದಾರೆ. ಫೋನ್ ತೆಗೆಯದಿದ್ದಕ್ಕೆ ಚಿಕ್ಕಮ್ಮ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -