- Advertisement -
- Advertisement -



ಎಡಮಂಗಲ ಗ್ರಾಮದ ನೂಜಾಡಿ ದಿ. ವಾಡ್ಯಪ್ಪ ಗೌಡರ ಪುತ್ರ ಜನಾರ್ಧನ ಗೌಡರು ಸೆ. ೨೬ ರಂದು ಪಕ್ಕದ ಮನೆಯವರ ತೋಟದಲ್ಲಿ ತೆಂಗಿನ ಮರಕ್ಕೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದ ಅವರು ಜೀವನದಲ್ಲಿ ಜಿಗುಪ್ಪೆಗೊಂಡಿದ್ದರು ಎಂದು ತಿಳಿದುಬಂದಿದೆ.
ಬೆಳ್ಳಾರೆ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಮಹಜರು ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.ಅವರಿಗೆ ೬೨ ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಜಾನಕಿ, ಪುತ್ರ ಬೆಂಗಳೂರಿನಲ್ಲಿರುವ ಉದ್ಯೋಗಿ ವಿಜಿತ್, ಪುತ್ರಿಯರಾದ ಸುಶ್ಮಿತಾ ಸತೀಶ್ ಉಪ್ಪಿನಂಗಡಿ, ಶರಣ್ಯ ಪ್ರವೀಣ್ ಮುಂಡಾಲ, ಸಹೋದರ ವೆಂಕಪ್ಪ ಗೌಡ ನೂಜಾಡಿ, ನಾಲ್ವರು ಸಹೋದರಿಯರು, ಮೊಮ್ಮಕ್ಕಳು, ಬಂಧುಮಿತ್ರರನ್ನು ಅಗಲಿದ್ದಾರೆ.
- Advertisement -








