Tuesday, July 28, 2026
spot_imgspot_img
spot_imgspot_img

ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

ವಿಟ್ಲ: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕರೋಪಾಡಿ ಗ್ರಾಮದಲ್ಲಿ ನಡೆದಿದೆ.ಕರೋಪಾಡಿ ಗ್ರಾಮದ ಗುಬ್ಯ ನಿವಾಸಿ ಪದ್ಮನಾಭ ಶೆಟ್ಟಿ(36) ಮೃತಪಟ್ಟವರು.

ಪದ್ಮನಾಭ ಶೆಟ್ಟಿ ಅವರು ಸೋಮವಾರ ಮನೆಯಿಂದ ಕಬ್ಬಿನಮೂಲೆ ಅಂಗಡಿಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಟಾರ್ಚ್ ಲೈಟ್ ಹಿಡಿದುಕೊಂಡು ಹೋದವರು ಹಿಂತಿರುಗಿ ಬಾರದೇ ನಾಪತ್ತೆಯಾಗಿದ್ದರು. ಮನೆಯವರೆಲ್ಲ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ಪದ್ಮನಾಭ ಅವರ ಮಗ ರಶ್ಮಿತ್ ಅವರು ತೋಟದಲ್ಲಿರುವ ಕೆರೆಯ ಬಳಿ ಹೋದಾಗ ಪದ್ಮನಾಭ ಶೆಟ್ಟಿ ಮನೆಯಿಂದ ತೆಗೆದು ಕೊಂಡು ಹೋದ ಟಾರ್ಚ್ ಲೈಟ್ ಕೆರೆಯ ಬಳಿ ಪತ್ತೆಯಾಗಿದೆ. ಕೆರೆಯಲ್ಲಿ ಹುಡುಕಾಡಿದಾಗ ಮೃತ ದೇಹ ಪತ್ತೆಯಾಗಿದೆ.

ಪದ್ಮನಾಭ ಅವರು ವಿಪರಿತ ಮದ್ಯಪಾನ ಸೇವನೆ ಮಾಡುವ ಚಟ ದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ತೋಟದ ಕೆರೆಯ ನೀರಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅವರ ಪತ್ನಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!