Monday, June 15, 2026
spot_imgspot_img
spot_imgspot_img

ಉಡುಪಿ: ಬಿಟ್ ಕಾಯಿನ್ ಇನ್ವೆಸ್ಟ್ ವಂಚನೆ; ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದವನನ್ನು ನಂಬಿದ್ದಕ್ಕೆ ಲಕ್ಷಾಂತರ ಕಳೆದುಕೊಂಡ ವ್ಯಕ್ತಿ

- Advertisement -
- Advertisement -

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವಕ ಬಿಟ್ ಕಾಯಿನ್ ಇನ್ವೆಸ್ಟ್ ಮಾಡಿ ಅತ್ಯಧಿಕ ಲಾಭ ಪಡೆಯಬಹುದು ಎಂದು ಹೇಳಿದ್ದನ್ನು ನಂಬಿದ ವ್ಯಕ್ತಿಯೋರ್ವ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.

ತುಷಾರ್ ಕಪೂರ್ ಎಂಬಾತ ಉಡುಪಿಯ ವ್ಯಕ್ತಿಯೋರ್ವರಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡು ಬಿಟ್ ಕಾಯಿನ್ ನಲ್ಲಿ ಇನ್‌‌ವೆಸ್ಟ್‌‌ಮೆಂಟ್ ಮಾಡುವಂತೆ ಸೂಚಿಸಿದ್ದ. ಅಲ್ಲದೆ, ಇನ್ವೆಸ್ಟ್ ಮೆಂಟ್ ಮಾಡಿದ್ದಲ್ಲಿ ಅತ್ಯಧಿಕ ಲಾಭ ಇದೆ ಎಂದು ನಂಬಿಸಿದ್ದ. ಅಲ್ಲದೆ ಖದೀಮ ಉಡುಪಿಯ ವ್ಯಕ್ತಿಯಿಂದ Binance ಹಾಗೂ Noones.com ನಲ್ಲಿ ವ್ಯಾಲೆಟ್ ಓಪನ್ ಮಾಡಿಸಿದ್ದ. ಆ ಮೂಲಕ ಹಣ ಪಾವತಿಸುವಂತೆ ಸೂಚಿಸಿದ್ದಾನೆ.

ಇದನ್ನು ನಂಬಿದ ಅಮಾಯಕ ವ್ಯಕ್ತಿ ಆರೋಪಿ ಸೂಚಿಸಿದ ಖಾತೆಗೆ ಹಂತ ಹಂತವಾಗಿ ಒಟ್ಟು 25,52,300/- ರೂ. ಹಣ ಪಾವತಿ ಮಾಡಿದ್ದರು. ಆ ಬಳಿಕ ಪಿರ್ಯಾದಿದಾರರ ವ್ಯಾಲೇಟ್ ನಲ್ಲಿದ್ದ ಬಿಟ್ ಕಾಯಿನ್ ನ್ನು ಆರೋಪಿಯು ಟ್ರಾನ್ಸ್‌‌ಫರ್ ಮಾಡಿ, ಬಿಟ್ ಕಾಯಿನ್ ನೀಡದೇ ಪಡೆದ ಹಣ ವಾಪಾಸು ನೀಡದೇ ಮೋಸ ಮಾಡಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!