Sunday, May 5, 2024
spot_imgspot_img
spot_imgspot_img

ಸುಳ್ಯ: ಅಕ್ರಮವಾಗಿ ಜೂಜಾಟವಾಡುತ್ತಿದ್ದ ಮಾಜಿ ಜಿ.ಪಂ.ಸದಸ್ಯ ಸೇರಿದಂತೆ 10 ಮಂದಿಯ ಬಂಧನ!

- Advertisement -G L Acharya panikkar
- Advertisement -

ಸುಳ್ಯ: ಜೂಜಾಟ ಆರೋಪದಲ್ಲಿ ಮಾಜಿ ಜಿ.ಪಂ.ಸದಸ್ಯ ಸೇರಿದಂತೆ 10 ಮಂದಿಯನ್ನು ಗಸ್ತು ನಿರತ ಸುಳ್ಯ ಪೊಲೀಸರು ರವಿವಾರ ಬಂಧಿಸಿದ್ದಾರೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ಮೋಂಡಡ್ಕ ಎಂಬಲ್ಲಿ ಆರೋಪಿಗಳಾದ ಬಿಜೆಪಿಯ ಮಾಜಿ ಜಿ.ಪಂ. ಸದಸ್ಯ ಗಂಗಾಧರ ಕೇಪಳಕಜೆ, ಗೋಪಾಲಕೃಷ್ಣ, ಗಂಗಾಧರ, ಚಂದ್ರಶೇಖರ, ರಾಮ, ಸೋಮಶೇಖರ, ಜನಾರ್ದನ, ದೀಪಕ್, ಮೋಹನ್ ದಾಸ್, ಅಶೋಕ, ದಯಾನಂದ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 1,890 ರೂ. ನಗದು, ವಾಹನ ಹಾಗು ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಬಂಧಿತರ ವಿರುದ್ಧ ಕೋವಿಡ್ ನಿಯಮ ಉಲ್ಲಂಘಿತ ಪ್ರಕಾರ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!