Friday, October 16, 2026
spot_imgspot_img
spot_imgspot_img

ಗೆಳೆಯನ ಜಾಮೀನಿಗೆ ಹಣ ಹೊಂದಿಸಲು ಮಾದಕವಸ್ತು ಸಾಗಾಟ – ಯುವತಿ ಅರೆಸ್ಟ್..!

- Advertisement -
- Advertisement -

ಅಮರಾವತಿ: ಮಾದಕ ವಸ್ತು ಸಂಬಂಧಿತ ಪ್ರಕರಣದಲ್ಲಿ ಜೈಲು ಸೇರಿದ್ದ ಗೆಳೆಯನ ಜಾಮೀನಿಗೆ ಹಣ ಹೊಂದಿಸಲು ಮಾದಕ ವಸ್ತು ಸಾಗಿಸುತ್ತಿದ್ದ ಯುವತಿಯನ್ನು ಪೊಲೀಸರು ಬಂಧಿಸಿರುವ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ನಾಗ ಸೌಮ್ಯ ಎಂದು ಗುರುತಿಸಲಾಗಿದೆ.

ಮೂರು ತಿಂಗಳ ಹಿಂದೆ ಚಿತ್ತೂರಿನಲ್ಲಿ ಮಾದಕವಸ್ತು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಾಗ ಸೌಮ್ಯಳ ಪ್ರಿಯಕರನನ್ನು ಬಂಧಿಸಲಾಗಿತ್ತು. ಅವನ ಜಾಮೀನಿಗಾಗಿ ಹಣ ಹೊಂದಿಸುವ ಸಲುವಾಗಿ, ನಾಗ ಸೌಮ್ಯ ಮಾದಕವಸ್ತು ಸಾಗಿಸುವ ಕೆಲಸ ಮಾಡಲು ಒಪ್ಪಿಕೊಂಡಿದ್ದು, ಬಶೀರ್ ಎಂಬ ವ್ಯಕ್ತಿ ಈ ಕೆಲಸಕ್ಕಾಗಿ ಆಕೆಗೆ 50,000 ರೂ. ನೀಡುವುದಾಗಿ ಆಮಿಷವೊಡ್ಡಿದ್ದ. ಬೆಂಗಳೂರಿನಿಂದ ವಿಜಯವಾಡಕ್ಕೆ ಮಾದಕ ವಸ್ತುಗಳನ್ನು ಸುರಕ್ಷಿತವಾಗಿ ತಲುಪಿಸಿದರೆ ಹಣ ನೀಡುವುದಾಗಿ ಬಶೀರ್ ಭರವಸೆ ನೀಡಿದ್ದ ಎನ್ನಲಾಗಿದೆ.

ಸುಲಭವಾಗಿ ಹಣ ಗಳಿಸಬಹುದು ಎಂಬ ಆಸೆಗೆ ಬಿದ್ದು ನಾಗ ಸೌಮ್ಯ ಈ ಕೆಲಸವನ್ನು ಒಪ್ಪಿಕೊಂಡಿದ್ದಳು. ಅದರಂತೆ ಸೌಮ್ಯ ಬೆಂಗಳೂರಿನಿಂದ ವಿಜಯವಾಡಕ್ಕೆ ಸುಮಾರು 110 ಗ್ರಾಂ ಎಂಡಿಎಂಎ ಸಾಗಿಸುತ್ತಿದ್ದಳು. ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿದ್ದು, ವಿಜಯವಾಡ ರೈಲು ನಿಲ್ದಾಣದಲ್ಲಿ ಕಣ್ಗಾವಲು ಇರಿಸಿದ್ದ ಪೊಲೀಸರು, ಆಕೆ ಮಾದಕವಸ್ತುಗಳನ್ನು ಸಾಗಿಸುತ್ತಿದ್ದಾಗ ಬಂಧಿಸಿದ್ದಾರೆ.

ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಬಶೀರ್‌ನ ಪಾತ್ರವಿರುವುದು ಬೆಳಕಿಗೆ ಬಂದಿದ್ದು, ಬಶೀರ್‌ನನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!