Friday, March 29, 2024
spot_imgspot_img
spot_imgspot_img

ಸುಳ್ಳಮಲೆಯ ಐತಿಹಾಸಿಕ ಕೆರೆಗಳ ಪುನರ್ ನಿರ್ಮಾಣ ಕಾರ್ಯಕ್ಕೆ ಅರಣ್ಯ ಇಲಾಖೆಯಿಂದ ಗ್ರೀನ್ ಸಿಗ್ನಲ್: ಮಾಣಿ ಪಂಚಾಯತ್ ಗೆ ಅರಣ್ಯ ಇಲಾಖೆ ನಿರ್ದೇಶನ

- Advertisement -G L Acharya panikkar
- Advertisement -

ಬಂಟ್ವಾಳ: ತುಳುನಾಡಿನ ದೈವಾರಾಧನೆಯ ಸಂದಿ ಪಾಡ್ದನದಲ್ಲಿ ಉಲ್ಲೇಖವಿರುವ ಐತಿಹಾಸಿಕ, ದಾರ್ಮಿಕ ಹಿನ್ನೆಲೆಯ ಸುಳ್ಳಮಲೆ ಬೆಟ್ಟ ಬಂಟ್ವಾಳ ತಾಲೂಕಿನಲ್ಲೇ ಚಿರಪರಿಚಿತ ಜಾಗ.

ಇಲ್ಲಿ ಪ್ರಾಚೀನ ,ದಾರ್ಮಿಕ ಹಿನ್ನೆಲೆ ಇರುವ ಏಳು ಕೆರೆಗಳಿದ್ದು ಅವು ಕಾಲಗರ್ಭಗಳಲ್ಲಿ ವೈಭವವನ್ನು ಪಡೆದಿದ್ದು ಈಗ ಶಿಥಿಲವಾಗಿದೆ. ಪ್ರಸ್ತುತ ಸುಳ್ಳಮಲೆ ಸರಕಾರದ ಅರಣ್ಯ ಇಲಾಖೆಯ ರಕ್ಷಿತಾರಣ್ಯವಾಗಿದೆ.

ಇದೀಗ ಅರಣ್ಯ ಇಲಾಖೆಯು ಸುಳ್ಳಮಲೆಯ ಚಾರಿತ್ರಿಕ ಹಿನ್ನೆಲೆಯ ಏಳು ಕೆರೆ ಯನ್ನು ಎಂ.ಜಿ.ಎನ್.ಆರ್.ಇ.ಜಿ.ಎಸ್ (ಉದ್ಯೋಗ ಖಾತರಿ ಯೋಜನೆ) ಮೂಲಕ ಹೂಳೆತ್ತುವ ಮೂಲಕ ಪುನರ್ ರ್ನಿರ್ಮಾಣ ಮಾಡಲು ಸ್ಥಳೀಯ ಮಾಣಿ ಗ್ರಾಮ ಪಂಚಾಯತ್ ಗೆ ನಿರ್ದೇಶನದ ಜೊತೆಯಲ್ಲಿ ಶರತ್ತುಬದ್ದ ಅನುಮತಿ ನೀಡಿದೆ.

ಇದು ಸ್ಥಳೀಯರು ಹಾಗೂ ಗ್ರಾಮಸ್ಥರಲ್ಲಿ ಸಂತಸದ ವಿಚಾರ ಆಗಿರುತ್ತದೆ. ಮಾತ್ರವಲ್ಲದೆ ” ಗುಹಾತೀರ್ಥ ” ಸ್ಥಳೀಯ ಸುತ್ತಮುತ್ತಲಿನ ಹಲವಾರು ದಾರ್ಮಿಕ ಕ್ಷೇತ್ರ ಗಳ ಜೊತೆಯಲ್ಲಿ ಅವಿನಭಾವ ಸಂಬಂಧ ಹೊಂದಿರುವ ಈ ಸುಳ್ಳಮಲೆಯನ್ನು ಹಳೆಯದಾದ ಧಾರ್ಮಿಕ ಹಿನ್ನೆಲೆಯಲ್ಲಿ ಪುನರ್ ರ್ನಿರ್ಮಾಣ ಮಾಡಲು ಐತಿಹಾಸಿಕ ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಉತ್ತಮ ಧಾರ್ಮಿಕ ಕೇಂದ್ರವಾಗಿ ನಿರ್ಮಿಸಲಿ ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ಕೇಳಿಬರುತ್ತಿದೆ

driving
- Advertisement -

Related news

error: Content is protected !!