



ಸುಳ್ಯ: ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಾವರ ಪೇಟೆಯಲ್ಲಿ ನಡೆದಿದೆ
ಬಂಧಿತ ಆರೋಪಿಗಳನ್ನು ಮಂಡೆಕೋಲು ಗ್ರಾಮ ಸುಳ್ಯ ತಾಲೂಕು ಸುಪ್ರಿತ್ ಕೆ(22) ಹಾಗೂ ಜಾಲ್ಸೂರು ಗ್ರಾಮ ಸುಳ್ಯ ತಾಲೂಕು ಮಹಮ್ಮದ್ ಸಿನಾನ್(21) ಎಂದು ಗುರುತಿಸಲಾಗಿದೆ.
ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಾವರ ಪೇಟೆಯಲ್ಲಿರುವ ದಿನಸಿ ಅಂಗಡಿ ಮಾಲಕಮಹಮ್ಮದ್ ರಫೀಕ್ ಎಸ್ ಡಿ ರವರ ಬಾಬ್ತು ಅಡಿಕೆ ಸಂಗ್ರಹಿಸುವ ಗೋಡಾನ್‌ನಿಂದ ದಿನಾಂಕ:12.09.2025ರಂದು ರಾತ್ರಿ ಅಡಿಕೆಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾದ ಕ್ರಮಾಂಕ:103/2025 ಕಲಂ 331(4) 305(ಎ) 3(5) ಬಿಎನ್‌ಎಸ್-2023 ರಂತೆ ಪ್ರಕರಣ ದಾಖಾಲಾಗಿರುತ್ತದೆ.

ಈ ಬಗ್ಗೆ ತನಿಖೆ ನಡೆಸಲಾಗಿ ಪ್ರಕರಣದ ಇಬ್ಬರು ಆರೋಪಿಗಳನ್ನು ದಿನಾಂಕ:19.09.2025ರಂದು ಸುಳ್ಯ ತಾಲೂಕು ಮಂಡೆಕೋಲು ಗ್ರಾಮ ಮುರೂರು ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆದು ಆರೋಪಿಗಳು ಕಳುವು ಮಾಡಿದ 1 ಕ್ವಿಂಟಲ್ ಸುಲಿದ ಅಡಿಕೆ ಸಾಗಾಟ ಮಾಡಲು ಉಪಯೋಗಿಸಿರುವ ಕೆಎ 21 ಸಿ 5862ನೇ ನಂಬ್ರದ ಆಟೋ ರಿಕ್ಷಾವನ್ನು ಸ್ವಾದೀನಪಡಿಸಿಕೊಂಡು ಆರೊಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.








