Friday, June 19, 2026
spot_imgspot_img
spot_imgspot_img

ಸುಳ್ಯ: ಅಕ್ರಮ ಕೆಂಪು ಕಲ್ಲು ಸಾಗಾಟ; ಲಾರಿ ಹಾಗೂ ಚಾಲಕರು ಪೊಲೀಸ್ ವಶಕ್ಕೆ..!

- Advertisement -
- Advertisement -

ಸುಳ್ಯ: ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದವರನ್ನು ಲಾರಿಗಳು ಸಹಿತ ಚಾಲಕರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಸುಳ್ಯ ಆಲೆಟ್ಟಿ ಗ್ರಾಮದ ನಾರ್ಕೊಡು ಎಂಬಲ್ಲಿ ನಡೆದಿದೆ.

ಆ.3ರಂದು ಬೆಳಿಗ್ಗೆ, ಸುಳ್ಯ ಆಲೆಟ್ಟಿ ಗ್ರಾಮದ ನಾರ್ಕೊಡು ಎಂಬಲ್ಲಿ, ಕೆಎ 21 ಬಿ 5680 ನಂಬ್ರದ ಲಾರಿಯಲ್ಲಿ ಹಾಗೂ ಕೆಎ21 ಸಿ 6758 ನಂಬ್ರದ ಲಾರಿಯಲ್ಲಿ, ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆ ಇಲ್ಲದೇ ಕೆಂಪು ಕಲ್ಲನ್ನು ಎಲ್ಲಿಂದಲೋ ಕದ್ದು ಸಾಗಾಟ ಮಾಡುತ್ತಿದ್ದು, ಖಚಿತ ಮಾಹಿತಿಯ ಮೇರೆಗೆ ಸಂತೋಷ ಕುಮಾರ್‌ ಬಿ ಪಿ, ಪಿ ಎಸ್‌ ಐ ( ಕಾ&ಸು) ಸುಳ್ಯ ಪೊಲೀಸ್‌ ಠಾಣೆರವರು ಹಾಗೂ ಸಿಬ್ಬಂದಿಗಳು ಪತ್ತೆ ಮಾಡಿ, ಮುಂದಿನ ಕಾನೂನು ಕ್ರಮಕ್ಕಾಗಿ ಲಾರಿಗಳನ್ನು ಹಾಗೂ ಲಾರಿಗಳ ಚಾಲಕರನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ: 83/2025 ಕಲಂ: 83/2025 ಕಲಂ: 303(2) BNS & 4(1) 21MMRD& KARNATAKA MINOR MINERAL CONSISTENT RULE 3.44&66(1) &192(a)IMV Act ರಂತೆ‌ ಪ್ರಕರಣ ದಾಖಲಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.

- Advertisement -

Related news

error: Content is protected !!