Friday, June 19, 2026
spot_imgspot_img
spot_imgspot_img

ಸುಳ್ಯ: ಎರಡು ಕಾರುಗಳು ಮುಖಾಮುಖಿ ಡಿಕ್ಕಿ; ಮೂವರಿಗೆ ಗಾಯ

- Advertisement -
- Advertisement -

ಸುಳ್ಯ: ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಮೂವರು ಗಾಯಗೊಂಡ ಘಟನೆ ಮಾಣಿ-ಮೈಸೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕನಕಮಜಲು ಸಮೀಪದ ಪಂಜಿಗುಂಡಿ ಬಳಿ ನಡೆದಿದೆ.

ಸುಳ್ಯದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬಲೇನೋ ಕಾರು ಹಾಗೂ ಪುತ್ತೂರಿನಿಂದ ಗುತ್ತಿಗಾರು ಕಡೆಗೆ ಬರುತ್ತಿದ್ದ ಆಲ್ಟೊ ಕಾರು ನಡುವೆ ಅಪಘಾತ ಸಂಭವಿಸಿದೆ. ಅಪಘಾತದಿಂದ ಎರಡು ಕಾರುಗಳು ಜಖಂಗೊಂಡಿವೆ.

ಬಲೇನೋ ಕಾರು ಚಾಲಕ ಹಾಗೂ ಆಲ್ಟೊ ಕಾರಿನಲ್ಲಿದ್ದ ಗುತ್ತಿಗಾರಿನ ಮೂವರಿಗೂ ಗಾಯವಾಗಿದ್ದು ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

- Advertisement -

Related news

error: Content is protected !!