Tuesday, March 21, 2023
spot_imgspot_img
spot_imgspot_img

ಅಪ್ರಾಪ್ತೆಗೆ ಚಾಕಲೇಟ್ ನೀಡಿ ಮನೆಗೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ,

- Advertisement -G L Acharya G L Acharya
- Advertisement -

ಸುಳ್ಯ : ಪಕ್ಕದ ಮನೆಯ ಅಪ್ರಾಪ್ತೆಯನ್ನು ಚಾಕಲೇಟು ನೀಡಿ ಪುಸಲಾಯಿಸಿ ಕಳೆದ ನಾಲ್ಕು ತಿಂಗಳಿನಿಂದ ತನ್ನ ಮನೆಗೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರವೆಸಗಿದ ಆರೋಪಿಯನ್ನು ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೆಳ್ಳಾರೆ ದರ್ಖಾಸು ನಿವಾಸಿ ಸೆಲ್ವ ಕುಮಾರ್ (50) ಬಂಧಿತ. ಮನೆ ಸಮೀಪದಲ್ಲಿ ಆಟವಾಡುತ್ತಿದ್ದ ನೆರೆಮನೆಯ ಐದರ ಹರೆಯದ ಅಪ್ರಾಪ್ತೆಗೆ ಚಾಕಲೇಟು ನೀಡಿ ಆರೋಪಿ ಪುಸಲಾಯಿಸಿ ತನ್ನ ಮನೆಯೊಳಕ್ಕೆ ಕರೆದೊಯ್ದು ನಾಲ್ಕು ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ. ಮಂಗಳವಾರ ನಡೆದ ಘಟನೆಯನ್ನು ಅಪ್ರಾಪ್ತೆ ಹೆತ್ತವರಲ್ಲಿ ತಿಳಿಸಿದ್ದು, ಹೆತ್ತವರು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಅದರಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

- Advertisement -

Related news

error: Content is protected !!