Sunday, June 14, 2026
spot_imgspot_img
spot_imgspot_img

ಸುಳ್ಯ: ಅಡಿಕೆ ಮರದಿಂದ ಬಿದ್ದು ಗಾಯಗೊಂಡಿದ್ದ ಕಬಡ್ಡಿ ಆಟಗಾರ ಮೃತ್ಯು..!!

- Advertisement -
- Advertisement -

ಸುಳ್ಯ: ಕಳೆದ ಎಂಟು ತಿಂಗಳ ಹಿಂದೆ ಅಡಿಕೆ ಮರದಿಂದ ಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವ ಮೃತಪಟ್ಟ ಘಟನೆ ಅಮರಮುಡ್ನೂರು ಗ್ರಾಮದ ಚಿಕ್ಕಿನಡ್ಕದಲ್ಲಿ ನಡೆದಿದೆ.

ಸುಳ್ಯದ ಉತ್ತಮ ಕಬಡ್ಡಿ ಆಟಗಾರ ಎಂದೇ ಖ್ಯಾತಿ ಪಡೆದಿದ್ದ ಉಮೇಶ್ ಅಲಿಯಾಸ್ ಕಾಶಿ (24 ವರ್ಷ)ಮೃತಪಟ್ಟ ದುರ್ದೈವಿ. ಅಮರಮುಡ್ನೂರು ಗ್ರಾಮದ ಚಿಕ್ಕಿನಡ್ಕ ಕಾಲನಿ ನಿವಾಸಿ ಬಾಬು ಎಂಬವರ ಪುತ್ರ ಉಮೇಶ್ ಚಿಕ್ಕಿನಡ್ಕ ಕಳೆದ ಎಂಟು ತಿಂಗಳ ಹಿಂದೆ ಕಾಣಿಯೂರಿನಲ್ಲಿ ಅಡಿಕೆ ಗಿಡಗಳಿಗೆ ಔಷಧಿ ಸಿಂಪಡಿಸುತ್ತಿರುವ ಸಂದರ್ಭ ಆಯತಪ್ಪಿ ಕೆಳಕ್ಕೆ ಬಿದ್ದಿದ್ದರು. ಇದಾದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೊಂಟಕ್ಕೆ ಬಲವಾಗಿ ಪೆಟ್ಟು ಬಿದ್ದುದರಿಂದ ಉಮೇಶ್ ಮಲಗಿದಲ್ಲೇ ಇದ್ದರು.

ಇತ್ತೀಚೆಗೆ ಕಳೆದ ಒಂದು ವಾರದ ಹಿಂದೆ ಅನಾರೋಗ್ಯ ಉಲ್ಬಣಗೊಂಡಿದ್ದು ಅವರನ್ನು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ತಾಯಿ ಕಳೆದ ನವೆಂಬರ್ ನಲ್ಲಿ ಅಸೌಖ್ಯದಿಂದ ಮೃತಪಟ್ಟಿದ್ದರು.

- Advertisement -

Related news

error: Content is protected !!