Tuesday, March 21, 2023
spot_imgspot_img
spot_imgspot_img

ಅಕ್ರಮ ಗೋ ಸಾಗಾಟಗಾರನ ಬಂಧನ

- Advertisement -G L Acharya G L Acharya
- Advertisement -

ಸುಳ್ಯ:ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಳ್ಯ ಕಸಬಾ ಗ್ರಾಮದ ಜ್ಯೋತಿ ಸರ್ಕಲ್ ಎಂಬಲ್ಲಿ 14.07.2020 ರಂದು 2.45 ಸುಮಾರಿಗೆ KA 12B 5345 ಪಿಕಪ್ ವಾಹನದಲ್ಲಿ ಎರಡು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದುದನ್ನು ಸುಳ್ಯ ಪೊಲೀಸ್ ಠಾಣೆ ಉಪನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ತಡೆಯಲು ಯತ್ನಿಸಿದಾಗ ಪಿಕ್ಅಪ್ ಚಾಲಕ ಆರೋಪಿ ಕರಿಕೆ ಮನೆ ಮತ್ತು ಗ್ರಾಮ ಕೊಡಗು ಜಿಲ್ಲೆಯ ಅಬ್ದುಲ್ ಫಾರೂಕ್ (45) ಎಂಬಾತನು ತಪ್ಪಿಸಿಕೊಳ್ಳುವ ಯತ್ನದಲ್ಲಿ ಪೊಲೀಸರ ಜೀವಕ್ಕೆ ಹಾನಿಯಾಗುವಂತೆ ವಾಹನವನ್ನು ಪೊಲೀಸರ ಮೈಮೇಲೆ ಚಲಾಯಿಸಿ ಪರಾರಿಯಾಗಿರುವುದಾಗಿದೆ.

ಆತನನ್ನು ಪೊಲೀಸರು ಬೆನ್ನಟ್ಟಿದಾಗ ಪಿಕಪ್ ವಾಹನವನ್ನು ಇನ್ನೋರ್ವ ಆರೋಪಿ ಡಯಾನಾ ಎಂಬಾತನ ಮನೆಯ ಪಕ್ಕದಲ್ಲಿ ನಿಲ್ಲಿಸಿ ಡಯನಾನ ಮನೆಯ ಒಳಗೆ ಹೋಗಿದ್ದು ಡಯಾನಾನು ಮನೆಯ ಬಾಗಿಲನ್ನು ಹಾಕಿ ಸದರಿ ಆರೋಪಿಗೆ ಬೆಂಬಲವನ್ನು ನೀಡಿರುತ್ತಾರೆ. ಸದರಿ ಸ್ಥಳದಿಂದ ಆರೋಪಿ ಅಬ್ದುಲ್ ಫಾರೂಕ್ ನನ್ನು ಬಂಧಿಸಿ ಆತನಲ್ಲಿದ್ದ ತಲವಾರು ಹಾಗೂ ಇತರೆ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!