- Advertisement -
- Advertisement -
ಜು.14ರಂದು ಸುಳ್ಯದಲ್ಲಿ ಅಕ್ರಮ ದನ ಸಾಗಾಟ ಪ್ರಕರಣದಲ್ಲಿ ಬಂಧಿತನಾದ ಕರಿಕೆಯ ಅಬ್ದುಲ್ ಫಾರೂಕ್ ರವರಿಗೆ ಕೊರೊನ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಮುನ್ನೆಚರಿಕಾ ಕ್ರಮವಾಗಿ ಸುಳ್ಯ ಪೋಲೀಸ್ ಠಾಣೆ ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆರೋಪಿ ಬಂಧಿಸುವ ವೇಳೆ ಕರ್ತವ್ಯ ದಲ್ಲಿದ್ದ ಎಸ್.ಐ. ಹರೀಶ್ ಸೇರಿದಂತೆ ಮೂವರು ಪೋಲೀಸ್ ಸಿಬ್ಬಂದಿಗಳು ಹೋಂ ಕ್ವಾರೆಂಟೇನ್ ಗೆ ಈಗಾಗಲೇ ತೆರಳಿದ್ದಾರೆ.

ಇಂದಿನಿಂದ ಎರಡು ದಿನಗಳ ಕಾಲ ಪೋಲಿಸ್ ಸ್ಟೇಷನ್ ಸೀಲ್ ಡೌನ್ ಮಾಡಿ ಸ್ಯಾನಿಟೈಸಿಂಗ್ ಮಾಡಲಿರುವ ಹಿನ್ನೆಲೆ ಸಾರ್ವಜನಿಕರ ಭೇಟಿ ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -