Saturday, May 18, 2024
spot_imgspot_img
spot_imgspot_img

ಮೇ 26ರಂದು ಒಂದೇ ಬಾರಿ ಸೂಪರ್ ಮೂನ್, ಚಂದ್ರಗ್ರಹಣ, ರೆಡ್​​ ಬ್ಲಡ್​ ಮೂನ್ ಗೋಚರ

- Advertisement -G L Acharya panikkar
- Advertisement -

ಇದೇ ಮೇ 26ರಂದು ಆಗಸದಲ್ಲಿ ಮೂರು ಅಪರೂಪದ ದೃಶ್ಯಗಳನ್ನ ಕಾಣಬಹುದಾಗಿದೆ. ಇದು ವಿಜ್ಞಾನಿಗಳಲ್ಲಿ ಹಾಗೂ ಜನರಲ್ಲಿ ಕುತೂಹಲವನ್ನ ಹೆಚ್ಚು ಮಾಡಿದೆ. ಅದೇನಂದ್ರೆ ಈ ವರ್ಷದ ಮೊದಲ ಚಂದ್ರಗ್ರಹಣ ಮೇ. 26ರಂದು ಸಂಭವಿಸಲಿದೆ. ಈ ಬಾರಿಯ ಚಂದ್ರಗ್ರಹಣ ವಿಶೇಷವಾಗಿರಲಿದೆ. ಯಾಕಂದ್ರೆ ಅದೇ ದಿನ ಸೂಪರ್‌ಮೂನ್‌ ಹಾಗೂ ರೆಡ್​ ಬ್ಲಡ್​ ಮೂನ್ ಕೂಡ ಗೋಚರವಾಗಲಿದೆ.

ಇದ್ರಿಂದ ಚಂದ್ರಗ್ರಹ, ಸೂಪರ್ ಮೂನ್ ಹಾಗೂ ಕೆಂಪು ಚಂದ್ರನನ್ನು ಏಕಕಾಲಕ್ಕೆ ಕಾಣಬಹುದಾಗಿದೆ. ಮೇ.26ರಂದು ಆಸ್ಟ್ರೇಲಿಯಾ, ಜಪಾನ್‌, ಅಮೆರಿಕಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಸೂಪರ್‌ಮೂನ್‌ ದರ್ಶನವಾಗಲಿದೆ.

ಚಂದ್ರ ಭೂಮಿಗೆ ತುಂಬಾ ಹತ್ತಿರವಿದ್ದ ಸಮಯದಲ್ಲೇ ಹುಣ್ಣಿಮೆ ಅಥವಾ ಅಮಾವಾಸ್ಯೆ ಬಂದರೆ ಆಗ ಸೂಪರ್​ಮೂನ್ ಸಂಭವಿಸುತ್ತದೆ. ಇದರಿಂದ ಚಂದ್ರ ಎಂದಿಗಿಂತ ಹೆಚ್ಚು ದೊಡ್ಡದಾಗಿ ಹಾಗೂ ಪ್ರಕಾಶಮಾನವಾಗಿ ಕಾಣುತ್ತದೆ.

ಇನ್ನು ಚಂದ್ರ ಭೂಮಿಯ ನೆರಳಿನಿಂದ ಸಂಪೂರ್ಣವಾಗಿ ಆವರಿಸಿದಾಗ ಅದು ಕಪ್ಪಾಗುತ್ತದೆ. ಆದರೆ ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗುವುದಿಲ್ಲ. ಬದಲಾಗಿ ಕೆಂಪು ಬಣ್ಣದಿಂದ ಕಾಣುತ್ತದೆ. ಹೀಗಾಗಿ ಸಂಪೂರ್ಣ ಚಂದ್ರ ಗ್ರಹಣಗಳನ್ನು ಕೆಂಪು ಅಥವಾ ರಕ್ತ ಚಂದ್ರ ಎಂದು ಕರೆಯಲಾಗುತ್ತದೆ.

driving
- Advertisement -

Related news

error: Content is protected !!