Sunday, May 19, 2024
spot_imgspot_img
spot_imgspot_img

ವರ್ಲ್ಡ್​ ಟ್ರೇಡ್​ ಆರ್ಗನೈಸೇಷನ್ ಮುಖ್ಯಸ್ಥರಾಗಿ ನೇಮಕವಾದ ಮೊದಲ ಮಹಿಳೆ- ಇತಿಹಾಸ ಬರೆದ ನ್ಗೋಜಿ ಒಕೊಂಜೋ

- Advertisement -G L Acharya panikkar
- Advertisement -

ನೈಜೀರಿಯಾ: ವಿಶ್ವ ವಾಣಿಜ್ಯ ಸಂಸ್ಥೆ(ವರ್ಲ್ಡ್​ ಟ್ರೇಡ್​ ಆರ್ಗನೈಸೇಷನ್​)ನ ಮುಂದಿನ ಮುಖ್ಯಸ್ಥರಾಗಿ ನೈಜೀರಿಯಾದ ನ್ಗೋಜಿ ಒಕೊಂಜೋ-ಇವಿಯಾಲ ನೇಮಕಗೊಂಡಿದ್ದಾರೆ. ಇವರು ಈ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.

ನ್ಗೋಜಿ ಒಕೊಂಜೋ-ಇವಿಯಾಲ ರವರು ಎರಡು ಬಾರಿ ನೈಜೀರಿಯಾದ ಹಣಕಾಸು ಸಚಿವೆಯಾಗಿ ಹಾಗೂ ಮೊದಲ ನೈಜೀರಿಯನ್ ಮಹಿಳಾ ವಿದೇಶಾಂಗ ಸಚಿವೆಯಾಗಿ ಹುದ್ದೆ ಅಲಂಕರಿಸಿದ ಖ್ಯಾತಿ ಹೊಂದಿದ್ದಾರೆ. ಅಲ್ಲದೇ ವರ್ಲ್ಡ್ ಬ್ಯಾಂಕ್​ನಲ್ಲಿ 25 ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

1954ರಲ್ಲಿ ನೈಜೀರಿಯಾದಲ್ಲಿ ಜನಿಸಿದ ನ್ಗೋಜಿ ಒಕೊಂಜೋ ಬಹುತೇಕ ವರ್ಷಗಳನ್ನ ಅಮೆರಿಕಾದಲ್ಲಿ ಕಳೆದಿದ್ದಾರೆ. ಮ್ಯಾಸಚೂಸೆಟ್ಸ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಹಾರ್ವರ್ಡ್​ನಲ್ಲಿ ಪದವಿ ಮುಗಿಸಿದ್ದಾರೆ. ಅವರ ನಾಲ್ಕು ಮಕ್ಕಳು ಕೂಡಾ ಇದೀಗ ಅದೇ ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

- Advertisement -

Related news

error: Content is protected !!