Friday, October 9, 2026
spot_imgspot_img
spot_imgspot_img

ಸುರತ್ಕಲ್: ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಒಂದೂವರೆ ವರ್ಷದ ಮಗು ದಾರುಣ ಸಾವು!

- Advertisement -
- Advertisement -

ಸುರತ್ಕಲ್: ಒಂದೂವರೆ ವರ್ಷದ ಮಗು ನೀರಿನ ಬಕೆಟ್ ಗೆ ಬಿದ್ದು ಮೃತಪಟ್ಟಿರುವ ಘಟನೆ ಸುರತ್ಕಲ್ ನ ಕಾಟಿಪಳ್ಳದಲ್ಲಿ ನಡೆದಿದೆ.

ಕಾಟಿಪಳ್ಳ ನಿವಾಸಿ ನಝೀರ್ ದಂಪತಿಗಳ ಒಂದೂವರೆ ವರ್ಷದ ಮಗು ಬಕೆಟ್ ನ ನೀರಿಗೆ ಬಿದ್ದು ಮೃತಪಟ್ಟಿದೆ. ನಝೀರ್ ಮಗುವನ್ನು ಮಲಗಿಸಿದ್ದು, ಮಗುವಿನ ತಾಯಿ ಮನೆ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಮಗು ಎದ್ದು ಶಾಚಾಲಯಕ್ಕೆ ಹೋಗಿ ಬಕೆಟ್ ಗೆ ಬಿದ್ದಿದೆ.

ಕೆಲ ಸಮಯದ ಬಳಿಕ ಮಗುವಿಗಾಗಿ ಹುಡುಕಾಡಿದ ಪೋಷಕರಿಗೆ ಈ ಘಟನೆ ನಡೆದಿರುವುದು ತಿಳಿದುಬಂದಿದೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆದರೆ ಅದಾಗಲೇ ಮಗು ಮೃತಪಟ್ಟಿತು. ಈ ಘಟನೆಯ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!