Saturday, June 6, 2026
spot_imgspot_img
spot_imgspot_img

ಸುರತ್ಕಲ್‌: ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕಾರು; ಅಪಾಯದಿಂದ ಪಾರು..!

- Advertisement -
- Advertisement -

ಸುರತ್ಕಲ್‌: ಭಾರೀ ಮಳೆಯಾಗುತ್ತಿದ್ದ ಪರಿಣಾಮ ಸುರತ್ಕಲ್‌ ಎನ್‌ಐಟಿಕೆ ಸಮೀಪ ಕಾರೊಂದು ನಿಯಂತ್ರಣ ತಪ್ಪಿ ಮೇಲ್ಸೇತುವೆಯಿಂದ ಕೆಳಗಿನ ರಸ್ತೆಗೆ ಉರುಳಿ ಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನಿಂದ ಉಡುಪಿ ಕಡೆ ತೆರಳುತ್ತಿದ್ದ ಕಾರನ್ನು ಕುಂದಾಪುರ ನಿವಾಸಿ ಪ್ರತ್ಯಕ್ಷ ಎಂಬವರು ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಪಘಾತದಿಂದ ಅವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರತ್ಯಕ್ಷ ಅವರು ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿ ಕುಂದಾಪುರಕ್ಕೆ ಹಿಂದಿರುಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಎನ್‌ಐಟಿಕೆ ಬಳಿ ಏಕಾಏಕಿ ಬ್ರೇಕ್ ಹಾಕಿದ್ದಾರೆ. ಇದರಿಂದ ನಿಯಂತ್ರಣ ಕಳೆದುಕೊಂಡ ಕಾರು ಮೇಲೇತುವೆಯಿಂದ ಕೆಳಗಿದ್ದ ಸರ್ವಿಸ್ ರಸ್ತೆಗೆ ಹಾರಿ ಮಗುಚಿ ಬಿದ್ದಿದೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Related news

error: Content is protected !!