Monday, September 21, 2026
spot_imgspot_img
spot_imgspot_img

ಸುರತ್ಕಲ್ ಮುಕ್ಕ ಟೋಲ್ ಗೇಟ್ ಸಿಬ್ಬಂದಿಯಿಂದ ಅನುಚಿತ ವರ್ತನೆ; ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶದ ಮೇರೆಗೆ ಆರೋಪಿಯ ಬಂಧನ

- Advertisement -
- Advertisement -
vtv vitla
vtv vitla

ಮ0ಗಳೂರು: ಉಡುಪಿ ಮೂಲದ ದಂಪತಿಗಳು ವಾರಾಂತ್ಯದಲ್ಲಿ ತಮ್ಮ ಕಾರಿನಲ್ಲಿ ಉಡುಪಿಗೆ ತೆರಳುತ್ತಿದ್ದಾಗ, ಸುರತ್ಕಲ್ ಮುಕ್ಕದ ಟೋಲ್ ಗೇಟ್ ನಲ್ಲಿ ಸಿಬ್ಬಂದಿಯೋರ್ವ ತೀರಾ ಅನುಚಿತ ವರ್ತನೆ ತೋರಿದ ಪ್ರಕರಣ ನಡೆದಿದ್ದು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

vtv vitla

ಟೋಲ್ ಗೇಟ್ ಸಿಬ್ಬಂದಿ ಅನುಚಿತವಾಗಿ ವರ್ತಿಸಿದಾಗ ದಂಪತಿಗಳು ಸುರತ್ಕಲ್ ಠಾಣೆಗೆ ಕರೆ ಮಾಡಿದ್ದಾರೆ. ಈ ವೇಳೆ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಆಗಮಿಸದೇ ಇದ್ದಾಗ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ನೇರ ಕರೆ ಮಾಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಆರೋಪಿಯನ್ನು ಬಂಧಿಸಲು ಸುರತ್ಕಲ್ ಠಾಣೆಯ ಇನ್ಸ್ಪೆಕ್ಟರ್ ಅವರಿಗೆ ಒತ್ತಡ ಹೇರಿದ್ದಾರೆ. ಪರಿಣಾಮ ಸುರತ್ಕಲ್ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ದುರ್ವರ್ತನೆ ತೋರಿದ ಟೋಲ್ ಸಿಬ್ಬಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಇದೀಗ ಆರೋಪಿಯು ಜಾಮೀನು ರಹಿತ ನ್ಯಾಯಾಂಗ ಬಂಧನದಲ್ಲಿದ್ದಾನೆ.

- Advertisement -

Related news

error: Content is protected !!