Saturday, June 13, 2026
spot_imgspot_img
spot_imgspot_img

ಸುರತ್ಕಲ್: ಕೂಲಿ ಕಾರ್ಮಿಕ ನಾಪತ್ತೆ; ಪ್ರಕರಣ ದಾಖಲು

- Advertisement -
- Advertisement -

ಸುರತ್ಕಲ್: ಗಾರೆಕೆಲಸಕ್ಕೆ ತೆರಳಿ ಹಿಂದಿರುಗಿ ಬಾರದೆ ನಾಪತ್ತೆಯಾಗಿರುವ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾರ್ಖಂಡ್ ಮೂಲದ ನಿರ್ಮಲ್ ಮೋಹಾಲಿ(48) ಕಾಣೆಯಾದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಾರ್ಖಂಡ್‌ನಿಂದ ಕೆಲಸಕ್ಕೆಂದು ಬಂದು ಕೃಷ್ಣಾಪುರ ಮಠ ರಸ್ತೆಯ ದೊಡ್ಡು ಶೆಟ್ಟಿರವರ ಬಾಡಿಗೆ ಮನೆಯಲ್ಲಿ 2 ದಿನ ಉಳಿದುಕೊಂಡಿದ್ದರು. ಗಾರೆ ಕೆಲಸಕ್ಕೆಂದು ಹೋದವರು ಕೆಲಸ ಮುಗಿಸಿ ರೂಮಿಗೆ ಹೋಗುವುದಾಗಿ ಹೇಳಿ ಅಲ್ಲಿಂದ ಹೊರಟು ಹೋಗಿದ್ದು ಕಾಣೆಯಾಗಿದ್ದಾರೆ ಎಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ನಿರ್ಮಲ್ ಮೋಹಾಲಿ ಅವರು 5.5 ಅಡಿ ಎತ್ತರ, ಕಪ್ಪು ಮೈ ಬಣ್ಣ ಕೋಲು ಮುಖ, ಸಾಧಾರಣ ಶರೀರ, ದಪ್ಪ ಮೀಸೆ, ಕಪ್ಪು ಕೂದಲು ಹೊಂದಿರುತ್ತಾರೆ. ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ಬಿಳಿ ಬಣ್ಣದ ಹೂವಿನ ಚಿತ್ರವಿರುವ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು.

ಕಾಣೆಯಾದವರ ಬಗ್ಗೆ ಮಾಹಿತಿ ದೊರೆತಲ್ಲಿ ಸುರತ್ಕಲ್ ಪೋಲಿಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸ್‌ ನಿರೀಕ್ಷರಾದ ಪ್ರಮೋದ್ ಕುಮಾರದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!