Thursday, April 25, 2024
spot_imgspot_img
spot_imgspot_img

ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ-ನಕಲಿ ಪತ್ರಕರ್ತ ಪ್ರತೀಕ್ ಬಂಧನ.

- Advertisement -G L Acharya panikkar
- Advertisement -

ಮಂಗಳೂರು: ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನರನ್ನು ವಂಚಿಸಿತ್ತಿದ್ದ ನಕಲಿ ಪತ್ರಕರ್ತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಲಾಯಿಲಾ ನಿವಾಸಿ ಪ್ರತೀಕ್ ಕೋಟ್ಯಾನ್ ಯಾನೆ ಬ್ಲಾಕ್ ಮೇಲ್ ಪ್ರತೀಕ್ (27) ನನ್ನು ಆರೋಪಿ ಎಂದು ಗುರುತಿಸಲಾಗಿದೆ. ಈತನಿಗೂ ಕೆಲ ದಿನಗಳ ಹಿಂದೆ ಬಂಟ್ವಾಳದ ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಕೊಲೆ ಪ್ರಕರಣಕ್ಕೆ ನಿಕಟ ಸಂಬಂಧವಿಂದ್ದು ಆ ಆರೋಪದ ಮೇಲೆ ಬಂಧಿಸಿದ್ದಾರೆ.

ಸುರೇಂದ್ರ ಬಂಟ್ವಾಳ್ ಕೊಲೆ ನಡೆಯುವ ಮೊದಲೇ ಆರೋಪಿ ಪ್ರತೀಕ್ ಕೊಟ್ಯಾನ್ ಗೆ ಮಾಹಿತಿ ಇತ್ತು ಎನ್ನಲಾಗಿದೆ. ಇನ್ನೂ ಕೊಲೆ ಪ್ರಕರಣದ ಆರೋಪಿಗಳಾದ ಸತೀಶ್ ಹಾಗೂ ಗಿರೀಶ್ ನನ್ನು ತನ್ನ ಕಾರಿನಲ್ಲೇ ಇದೇ ಪ್ರತೀಕ್ ಉಜಿರೆಯ ತೋಟದ ಮನೆಯೊಂದರಲ್ಲಿ ಇರಿಸಿದ್ದ ಎನ್ನಲಾದ ಮಾಹಿತಿ ಕೂಡ ಇದೆ. ಇನ್ನೂ ನಂತರ ಆರೋಪಿಗಳನ್ನು ಪೊಲೀಸರಿಗೆ ಶರಣಾಗತಿ ಮಾಡುವ ನಾಟಕವಾಡಿ ತನ್ನ ಕಾರಿನಲ್ಲೇ ಕರೆದು ತಂದು ಸತೀಶ್ ಹಾಗೂ ಗಿರೀಶ್ ನನ್ನು ಬಂಟ್ವಾಳದ ಕಲ್ಲಡ್ಕ ಸಮೀಪದ ಪ್ರದೇಶದಲ್ಲಿ ಬಿಟ್ಟು ಪ್ರತೀಕ್ ಪರಾರಿಯಾಗಿದ್ದ ಎನ್ನಲಾದ ಮಾಹಿತಿ ಕೂಡ ಇದೆ. ಇಂತಹ ಮಹತ್ವದ ಮಾಹಿತಿಗಳನ್ನು ಬಂಧಿತ ಆರೋಪಿಗಳು ಪ್ರತೀಕ್ ಸುರೇಂದ್ರ ಕೊಲೆ ಪ್ರಕರಣದ ನಂತರ ಆರೋಪಿಗಳನ್ನು ಪೊಲೀಸರಿಗೆ ಶರಣಾಗತಿ ಮಾಡಿ ನಾಟಕವಾಡಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಆಕಾಶ್ ಭವನ್ ಶರಣ್ ನನ್ನು ಪೊಲೀಸರು ತನ್ನ ಕಷ್ಟಡಿಗೆ ಪಡೆಯುತ್ತಿದ್ದಂತೆ ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣಕ್ಕೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಆರೋಪಿಗಳಿಗೆ ಸಹಾಯ ಮಾಡಿದ ಆರೋಪದಲ್ಲಿ ಪ್ರತೀಕ್ ನನ್ನು ಬಂಧಿಸಲಾಗಿದೆ.

- Advertisement -

Related news

error: Content is protected !!