Sunday, May 19, 2024
spot_imgspot_img
spot_imgspot_img

ವಿನಯ,ತಾಳ್ಮೆ,ಧಾರ್ಮಿಕತೆ ಮೊದಲಾದ ಸದ್ಗುಣಗಳನ್ನು ಮೈಗೂಡಿಸಿರಿ : ಝೈನುಲ್ ಉಲಮಾ

- Advertisement -G L Acharya panikkar
- Advertisement -

ಮಾಣಿ : ಎಸ್‌ವೈಎಸ್ ನಂತಹ ಸಂಘಟನೆಗಳು ಸುನ್ನತ್ ಜಮಾ ಅತ್‌ಗಾಗಿ ಕಾರ್ಯ ನಿರ್ವಹಿಸುತ್ತಿರುವುದೇ ಈ ಸಂಘಟನೆಗಿರುವ ದೊಡ್ಡ ಮಹತ್ವವಾಗಿದೆ,ತೀವ್ರ ಅನಾರೋಗ್ಯ ಸಮಸ್ಯೆ ಇದ್ದರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಈ ಸಂಘಟನೆ ಮತ್ತು ಕಾರ್ಯಕರ್ತರಾದ ನಿಮ್ಮೊಂದಿಗಿರುವ ಪ್ರೀತಿಯಿಂದ ಮಾತ್ರವಾಗಿದೆ ಧಾರ್ಮಿಕತೆ, ವಿನಯ,ತಾಳ್ಮೆ ಮೊದಲಾದ ಉತ್ತಮ ಗುಣ ನಡತೆಗಳನ್ನು ಮೈಗೂಡಿಸಿಕೊಳ್ಳಿರಿ ಎಂದು ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದರು ಉಪದೇಶಿಸಿದರು.


ಅವರು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ರಿ.) ಎಸ್‌ವೈಎಸ್ ಮಾಣಿ ಸೆಂಟರ್ ಇದರ ವತಿಯಿಂದ ಮಾಣಿ ದಾರುಲ್ ಇರ್ಶಾದ್ ನಲ್ಲಿ ನಡೆದ “ಕೌಂಟ್ 20″ವಾರ್ಷಿಕ ಕೌನ್ಸಿಲ್ ಕಾರ್ಯಕ್ರಮದಲ್ಲಿ ದುಆಃ ನೆರೆವೇರಿಸಿ ಮಾತನಾಡಿದರು,ಈ ಸಂದರ್ಭದಲ್ಲಿ ಉಡುಪಿ, ಚಿಕ್ಕಮಗಳೂರು,ಹಾಸನ, ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡದ ಹಲವು ಮೊಹಲ್ಲಾದ ಖಾಝಿ ಸ್ಥಾನ ಅಲಂಕರಿಸಿದ ಝೈನುಲ್ ಉಲಮಾರನ್ನು ಸೆಂಟರ್ ವತಿಯಿಂದ ಶಾಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಎಸ್‌ವೈಎಸ್ ಮಾಣಿ ಸೆಂಟರ್ ಅಧ್ಯಕ್ಷರಾದ ಇಬ್ರಾಹಿಂ ಸ‌ಅದಿ ಮಾಣಿರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೆಟ್ಟ ಜನರ ಗೆಳೆತನವು ಕೆಡುಕಿನತ್ತ ಸೆಳೆಯುತ್ತದೆ,ದಾರಿ ತಪ್ಪುತ್ತಿರುವ ನಮ್ಮ ಮಕ್ಕಳ ಬಗ್ಗೆ ಹೆಚ್ಚನ ನಿಗಾ ವಹಿಸುವುದು ಹೆತ್ತವರ ಕರ್ತವ್ಯವಾಗಿದೆ ಅದಕ್ಕಾಗಿ ಎಳೆಯ ಪ್ರಾಯದಲ್ಲೇ ಮಕ್ಕಳಿಗೆ ಸುನ್ನೀ ಆದರ್ಶಗಳನ್ನು ಕಲಿಸಿ,ಸುನ್ನೀ ಸಂಘಟನೆಗಳಲ್ಲಿ ಸದಸ್ಯತ್ವ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.ಸೆಂಟರ್ ನಾಯಕರಾದ ಹೈದರ್ ಸಖಾಫಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಎಸ್‌ವೈಎಸ್ ಮಾಣಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ರವರು ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿದರು.ವೀಕ್ಷಕರಾಗಿ ಆಗಮಸಿದ ಜಿಲ್ಲಾ ನಾಯಕರಾದ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವುರವರು ವರದಿ ಹಾಗೂ ಲೆಕ್ಕಪತ್ರವನ್ನು ಪರಿಶೀಲಿಸಿದರು.ಸೆಂಟರ್ ಇಸಾಬಾ ಕಾರ್ಯದರ್ಶಿ ಸುಲೈಮಾನ್ ಸ‌ಅದಿ ಪಾಟ್ರಕೋಡಿ ಹಾಗೂ ಬಂಟ್ವಾಳ ತಾಲೂಕು ಸ‌ಅದೀಸ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಸ‌ಅದಿ ಮಿತ್ತೂರುರವರು ಸಂಘಟನಾ ತರಗತಿ ನಡೆಸಿಕೊಟ್ಟರು.


ಕಾರ್ಯಕ್ರಮದಲ್ಲಿ ಸೆಂಟರ್ ಉಪಾಧ್ಯಕ್ಷರಾದ ಯೂಸುಫ್ ಹಾಜಿ ಸೂರಿಕುಮೇರು,ಹಿರಿಯ ನಾಯಕರಾದ ಸುಲೈಮಾನ್ ಸೂರಿಕುಮೇರು,ದಾವೂದ್ ಕಲ್ಲಡ್ಕ,ಪಿ. ಎಚ್. ಅಬ್ದುಲ್ ಲತೀಫ್ ಕಲ್ಲಡ್ಕ,ಹಂಝ ಸೂರಿಕುಮೇರು,ಕಾಸಿಂ ಪಾಟ್ರಕೋಡಿ,ಇಬ್ರಾಹಿಂ ಹಾಜಿ ಪೇರಮೊಗರು,ಮೊಯ್ದಿನ್ ಪೆರ್ನೆ,ಹಬೀಬ್ ಶೇರಾ, ಅಬ್ದುಲ್ ಲತೀಫ್ ಸ‌ಅದಿ ಶೇರಾ,ರಫೀಕ್ ಮದನಿ ಪಾಟ್ರಕೋಡಿ,ಅಬ್ಬಾಸ್ ಗಡಿಯಾರ,ಯ‌ಅ್‌ಕೂಬ್ ನಚ್ಚಬೆಟ್ಟು,ಅಬ್ದುಲ್ ಖಾದರ್ ಶೇರಾ ಮೊದಲಾದವರು ಉಪಸ್ಥಿತರಿದ್ದರು.ಸೆಂಟರ್ ವ್ಯಾಪ್ತಿಯ ಬ್ರಾಂಚ್‌ಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೌನ್ಸಿಲರುಗಳು ಭಾಗವಹಿಸಿದರು.
ಕಾರ್ಯಕ್ರಮ ನಿರ್ವಹಣಾ ಕಾರ್ಯದರ್ಶಿ ಸಾದಿಖ್ ಪೇರಮೊಗರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!