Monday, November 9, 2026
spot_imgspot_img
spot_imgspot_img
Home Tags Vtv vitla

Tag: vtv vitla

ಧರ್ಮಸ್ಥಳ ಪ್ರಕರಣ: ಇನ್ನೆರಡು ಪ್ರಕರಣಗಳು ಎಸ್ ಐಟಿಗೆ ವರ್ಗಾವಣೆ

ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಧರ್ಮಸ್ಥಳದ ನಿಗೂಢ ಸಾವುಗಳ ಸರಣಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳೀಯ ಠಾಣೆಯಲ್ಲಿ ದಾಖಲಾಗಿದ್ದ ಅಸಹಜ ಸಾವು ಪ್ರಕರಣ (ಯುಡಿಆರ್) ಹಾಗೂ ಪ್ರತ್ಯೇಕ ದೂರು ಅರ್ಜಿಯೊಂದರ ತನಿಖೆಯನ್ನು ಪ್ರಣವ್ ಮೊಹಾಂತಿ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು (ಡಿಜಿಪಿ ಮತ್ತು ಐಜಿಪಿ) ಮಹತ್ವದ ಆದೇಶ ಹೊರಡಿಸಿದ್ದಾರೆ.ಪ್ರಕರಣದ ಸೂಕ್ಷ್ಮತೆ ಹಾಗೂ ಗಂಭೀರತೆಯನ್ನು ಪರಿಗಣಿಸಿ, ಕೂಲಂಕಷ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳು ಖಚಿತಪಡಿಸಿವೆ.ಅನಾಮಿಕ ವ್ಯಕ್ತಿಯೊಬ್ಬರು ನೀಡಿದ ಮಾಹಿತಿಯ ಮೇರೆಗೆ ಎಸ್‌ಐಟಿ ತಂಡವು ಧರ್ಮಸ್ಥಳ ವ್ಯಾಪ್ತಿಯಲ್ಲಿ ಉತ್ಖನನ ನಡೆಸುತ್ತಿತ್ತು. ಜುಲೈ 31ರಂದು ‘6ನೇ ಪಾಯಿಂಟ್‌’ ಎಂದು ಗುರುತಿಸಲಾದ ಸ್ಥಳದಲ್ಲಿ ಅಗೆದಾಗ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಈ ಕುರಿತು ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ್ ಅವರು ಆಗಸ್ಟ್ 1ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಅನ್ವಯ, ಅಸಹಜ ಸಾವು (ಯು.ಡಿ.ಆರ್. ಸಂಖ್ಯೆ 35/2025) ಪ್ರಕರಣವನ್ನು ಕಲಂ 174 (3) & (VI) ಸಿ.ಆರ್.ಪಿ.ಸಿ ಅಡಿಯಲ್ಲಿ ದಾಖಲಿಸಿಕೊಳ್ಳಲಾಗಿತ್ತು. ಇದೀಗ ಈ ಪ್ರಕರಣದ ತನಿಖಾ ಜವಾಬ್ದಾರಿಯನ್ನು ಸಂಪೂರ್ಣವಾಗಿ ಎಸ್‌ಐಟಿಗೆ ವಹಿಸಲಾಗಿದೆ. ಜಯಂತ್ ದೂರು ಸಹ ಹಸ್ತಾಂತರ: ಇದೇ ವೇಳೆ, ಬೆಳ್ತಂಗಡಿ ತಾಲ್ಲೂಕಿನ ಇಚಿಲಂಪಾಡಿ ನಿವಾಸಿ ಜಯಂತ್ ಟಿ. ಎಂಬುವವರು ನೀಡಿದ್ದ ದೂರು ಅರ್ಜಿಯನ್ನೂ ಎಸ್‌ಐಟಿಗೆ ವರ್ಗಾಯಿಸಲಾಗಿದೆ. ಜಯಂತ್ ಅವರು ಮೊದಲು ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ದೂರು ನೀಡಲು ತೆರಳಿದ್ದರು. ನಿಯಮಾನುಸಾರ, ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ, ಆಗಸ್ಟ್ 4ರಂದು ಧರ್ಮಸ್ಥಳ ಠಾಣೆಯಲ್ಲಿ ಅವರು ಸಲ್ಲಿಸಿದ್ದ ದೂರರ್ಜಿಯನ್ನು (ಸಂಖ್ಯೆ 200/DPS/2025) ಸ್ವೀಕರಿಸಲಾಗಿತ್ತು.

ಸರ್ಕಾರದ ಜೊತೆ ಕೈಜೋಡಿಸಿ: ಸಾರಿಗೆ ನೌಕರರಿಗೆ ಡಿ ಕೆ ಶಿವಕುಮಾ‌ರ್ ಮನವಿ

ಬೆಂಗಳೂರು: ಸಾರಿಗೆ ನೌಕರರ ಬೇಡಿಕೆ ನ್ಯಾಯಯುತವಾದದ್ದೇ. ಆದರೆ ಸರ್ಕಾರದ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ನೌಕರರಿಗೆ ನೆರವಾಗುವ ಮನಸ್ಥಿತಿಯನ್ನು ಸಿ ಎಂ, ಸಾರಿಗೆ ಸಚಿವರು ಹೊಂದಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಸಾರಿಗೆ ನೌಕರರ...

ಧರ್ಮಸ್ಥಳ: ನೂರಾರು ಶವ ಹೂತಿಟ್ಟ ಪ್ರಕರಣ; ಅಚ್ಚರಿಯ ಪಾಯಿಂಟ್‌ನಲ್ಲಿ ಸೀರೆ ಸೇರಿದಂತೆ ಮೂರು ಕಳೆಬರ...

ಬೆಳ್ತಂಗಡಿ: ಸೋಮವಾರ (ಆ.4) ಎಸ್‌ಐಟಿ ಕಾರ್ಯಾಚರಣೆಯ ವೇಳೆ ಕನಿಷ್ಠ ಮೂರು ಕಳೇಬರ ಪತ್ತೆಯಾಗಿದೆ ಅದರಲ್ಲಿ ಒಂದು ಕಳೇಬರ ಮಹಿಳೆಯದ್ದಾಗಿದೆ ಎಂದು, ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ...

ವಿಟ್ಲ: (ಆ.8) ವಿಶ್ವ ಹಿಂದು ಪರಿಷದ್‌ ಮಾತೃಮಂಡಳಿ, ದುರ್ಗಾವಾಹಿನಿ ಆಶ್ರಯದಲ್ಲಿ 31ನೇ ವರ್ಷದ ಸಾಮೂಹಿಕ...

ವಿಟ್ಲ: ವಿಶ್ವ ಹಿಂದು ಪರಿಷದ್‌ ಮಾತೃಮಂಡಳಿ, ದುರ್ಗಾವಾಹಿನಿ ವಿಟ್ಲ ಇದರ ಆಶ್ರಯದಲ್ಲಿ 31ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯು ಆಗಷ್ಟ್‌ 8-8-2025ನೇ ಶುಕ್ರವಾರ ಬೆಳಿಗ್ಗೆ 9:00 ಗಂಟೆಗೆ ವಿಟ್ಲ ಶ್ರೀ...

ಪಾವಂಜೆ ಬ್ರಿಡ್ಜ್‌ನಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು

ಪಾವಂಜೆ ಬ್ರಿಡ್ಜ್‌ನಿಂದ ನದಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ವ್ಯಕ್ತಿಯನ್ನು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೊಲೀಸರು ರಕ್ಷಿಸಿದ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಪಿ.ವಿ.ಎಸ್ ಕಲಾಕುಂಜದ ಬಳಿಯ ನಿವಾಸಿ ವಿಶ್ವನಾಥ ಶೆಟ್ಟಿ (75)...

ಉಡುಪಿ: ಕೂಲಿ ಕೆಲಸಕ್ಕೆ ತೆರಳಿದ ವ್ಯಕ್ತಿ ವಾಪಾಸು ಬಾರದೇ ನಾಪತ್ತೆ

ಉಡುಪಿ: ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ವ್ಯಕ್ತಿಯೋರ್ವ ನಾಪತ್ತೆಯಾದ ಘಟನೆ ಬ್ರಹ್ಮಾವರ ತಾಲೂಕು ಪೆಜಮಂಗೂರು ಗ್ರಾಮದ ಕೊಕ್ಕರ್ಣೆ ಕೆಳಪೇಟೆಯಲ್ಲಿ ನಡೆದಿದೆ. ನಾಪತ್ತೆಯಾದ ವ್ಯಕ್ತಿಯನ್ನು ಸುರೇಂದ್ರ ನಾಯ್ಕ(36) ಎಂದು ಗುರುತಿಸಲಾಗಿದೆ. ಸುರೇಂದ್ರ ನಾಯ್ಕ ಎಂಬವರು ಜೂ.28ರಂದು ಕೂಲಿ ಕೆಲಸಕ್ಕೆಂದು...

ವಿಟ್ಲ: (ಆ. 5-31) ಶ್ರೀ ಎನರ್ಜಿ ಸೋಲಾರ್‍ ಸಂಸ್ಥೆಯಲ್ಲಿ ಸೋಲಾರ್‌ ಉಪಕರಣಗಳ ಮೇಲೆ ವಿಶೇಷ...

ವಿಟ್ಲ: ವಿಟ್ಲ-ಮಂಗಳೂರು ಮುಖ್ಯ ರಸ್ತೆಯಲ್ಲಿ ಕಾರ್ಯನಿರ್ವಹಿಸುವ ಶ್ರೀ ಎನರ್ಜಿ ಸೋಲಾರ್‍ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣೇಶ ಚತಿರ್ಥಿಯ ಪ್ರಯುಕ್ತ ಗ್ರಾಹಕರಿಗೆ ಸೋಲಾರ್‌ ಉಪಕರಣಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗಿದೆ. ಆಗಸ್ಟ್‌ 5 ರಿಂದ...

ಧರ್ಮಸ್ಥಳ ಪ್ರಕರಣ; 11 ನೇ ಗುರುತು ಮಾಡಿದ ಸ್ಥಳದಲ್ಲಿ ಸಿಗದ ಅಸ್ಥಿಪಂಜರ

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಅವಶೇಷ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಆ.5 ರಂದು 11 ನೇ ಗುರುತು ಮಾಡಿದ ಸ್ಥಳದಲ್ಲಿ 11:30 ರಿಂದ...

ಪಾಕ್ ಪರ ಬೇಹುಗಾರಿಕೆ; ಆರೋಪಿಯ ಬಂಧನ..!

ಜೈಪುರ: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಮತ್ತೋರ್ವ ಶಂಕಿತನನ್ನು ಭದ್ರತಾ ಸಂಸ್ಥೆಗಳು ಬಂಧಿಸಿವೆ. ಬಂಧಿತ ಆರೋಪಿಯನ್ನು ರಾಜಸ್ಥಾನದ ಜೈಸಲ್ಮೇರ್‌ನ ಚಂದನ್ ಗ್ರಾಮದ ನಿವಾಸಿ ಮಹೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಬಂಧಿತ ವ್ಯಕ್ತಿ ಜೈಸಲ್ಮೇರ್‌ನ ಡಿಆರ್‌ಡಿಒ ಅತಿಥಿ...

ವಿಟ್ಲ: ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ) ವಿಟ್ಲ ಘಟಕ ವತಿಯಿಂದ ಪೊಲೀಸ್‌...

ವಿಟ್ಲ: ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ) ವಿಟ್ಲ ಘಟಕ ವತಿಯಿಂದ ವಿಟ್ಲ ಪೊಲೀಸ್‌ ಠಾಣೆಗೆ ವಿಟ್ಲ ಠಾಣಾ ಎಸ್‌.ಐ ರಾಮಕೃಷ್ಣ, ಹಾಗೂ ರತನ್‌, ಸಿಬ್ಬಂದಿ ರಕ್ಷಿತ್‌ ಶೆಟ್ಟಿಯವರ ಸಮ್ಮುಖದಲ್ಲಿ 100...
error: Content is protected !!