- Advertisement -
- Advertisement -



ವಿಟ್ಲ: ವಿಶ್ವ ಹಿಂದು ಪರಿಷದ್ ಮಾತೃಮಂಡಳಿ, ದುರ್ಗಾವಾಹಿನಿ ವಿಟ್ಲ ಇದರ ಆಶ್ರಯದಲ್ಲಿ 31ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯು ಆಗಷ್ಟ್ 8-8-2025ನೇ ಶುಕ್ರವಾರ ಬೆಳಿಗ್ಗೆ 9:00 ಗಂಟೆಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ಸದನದಲ್ಲಿ ನಡೆಯಲಿದೆ.
ಬೆಳಿಗ್ಗೆ 9:00ಕ್ಕೆ ಶ್ರೀ ವರಮಹಾಲಕ್ಷ್ಮೀ ಪೂಜೆ ಆರಂಭವಾಗಿ 11:00 ರಂದ ಧಾರ್ಮಿಕ ಸಭೆ ನಡೆಯಲಿದೆ. ಬಳಿಕ 12:00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ.
ವಿ.ಸೂ: ಶ್ರೀ ವರಮಹಾಲಕ್ಷ್ಮೀ ಪೂಜೆಗೆ ರೂ.150/-
ಭಕ್ತಾಧಿಗಳು ಪೂಜಾ ದಿನದಂದೇ ಸಂಜೆ 5:00 ರ ಒಳಗೆ ಪ್ರಸಾದವನ್ನು ಪಡೆದುಕೊಳ್ಳಬೇಕು.
ಭಕ್ತಾದಿಗಳಿಂದ ಹೂ, ಹಣ್ಣು, ತೆಂಗಿನಕಾಯಿ , ಅಕ್ಕಿ, ಹಿಂಗಾರ ಇತ್ಯಾದಿ ವಸ್ತುಗಳನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
- Advertisement -








