Monday, November 9, 2026
spot_imgspot_img
spot_imgspot_img
Home Tags Vtv

Tag: vtv

ಧರ್ಮಸ್ಥಳ: ಬಸ್ಸಿನ ಗಾಜಿಗೆ ಕಲ್ಲು ಹೊಡೆದ ದ್ವಿಚಕ್ರ ವಾಹನ ಸವಾರ

ಬೆಳ್ತಂಗಡಿ: ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ದ್ವಿಚಕ್ರ ವಾಹನ ಸವಾರನೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಧರ್ಮಸ್ಥಳ ಘಟಕದಲ್ಲಿ ಸಂಚಾರ ನಿಯಂತ್ರಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬೆಳ್ತಂಗಡಿ, ಲಾಯಿಲ...

ವೀರಕಂಭ: ಬಂಟರ ಸಂಘ ಕಲ್ಲಡ್ಕ ವಲಯ ಮಹಿಳಾ ಹಾಗೂ ಯುವ ವಿಭಾಗದ ಸಹಯೋಗದಲ್ಲಿ ಆಟಿದ...

ಉದ್ಘಾಟನಾ ಕಾರ್ಯಕ್ರಮ-ಗೌರವ ಸಮರ್ಪಣೆ, ಸಮಾರೋಪ ಸಮಾರಂಭ ವೀರಕಂಭ: ಬಂಟರ ಸಂಘ ಕಲ್ಲಡ್ಕ ವಲಯ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸಹಯೋಗದೊಂದಿಗೆ ಆಟಿದ ತಿಂಗೊಲ್ಡು ಬಂಟೆರ್‍ನ "ಕೆಸರ್‍ದ ಕಂಡೊಡು ಕುಸಾಲ್ದ ಗೊಬ್ಬು" ಕಾರ್ಯಕ್ರಮ ಆ....

ಮಂಗಳೂರಿಗೆ ಬಂದಿಳಿದ T-55 ಯುದ್ಧ ಟ್ಯಾಂಕ್

ಸಾಮಾನ್ಯವಾಗಿ ಯುದ್ಧದಲ್ಲಿ ಪಾಲ್ಗೊಂಡು ಸೇವೆಯಿಂದ ನಿವೃತ್ತಿ ಪಡೆದ ಟ್ಯಾಂಕ್ ಮತ್ತಿತರ ಸೇನೆಯ ಆಯುಧಗಳನ್ನು ವಾರ್ ಟ್ರೋಫಿ (ಯುದ್ಧ ಸ್ಮರಣಿಕೆ) ರೀತಿಯಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಅದೇ ರೀತಿ ಮಂಗಳೂರಿಗೆ ಟ್ಯಾಂಕ್ ಅನ್ನು ನೀಡುವಂತೆ ಸಂಸದ...

ಧರ್ಮಸ್ಥಳ ಪ್ರಕರಣ: ಇನ್ನೆರಡು ಪ್ರಕರಣಗಳು ಎಸ್ ಐಟಿಗೆ ವರ್ಗಾವಣೆ

ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಧರ್ಮಸ್ಥಳದ ನಿಗೂಢ ಸಾವುಗಳ ಸರಣಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳೀಯ ಠಾಣೆಯಲ್ಲಿ ದಾಖಲಾಗಿದ್ದ ಅಸಹಜ ಸಾವು ಪ್ರಕರಣ (ಯುಡಿಆರ್) ಹಾಗೂ ಪ್ರತ್ಯೇಕ ದೂರು ಅರ್ಜಿಯೊಂದರ ತನಿಖೆಯನ್ನು ಪ್ರಣವ್ ಮೊಹಾಂತಿ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು (ಡಿಜಿಪಿ ಮತ್ತು ಐಜಿಪಿ) ಮಹತ್ವದ ಆದೇಶ ಹೊರಡಿಸಿದ್ದಾರೆ.ಪ್ರಕರಣದ ಸೂಕ್ಷ್ಮತೆ ಹಾಗೂ ಗಂಭೀರತೆಯನ್ನು ಪರಿಗಣಿಸಿ, ಕೂಲಂಕಷ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳು ಖಚಿತಪಡಿಸಿವೆ.ಅನಾಮಿಕ ವ್ಯಕ್ತಿಯೊಬ್ಬರು ನೀಡಿದ ಮಾಹಿತಿಯ ಮೇರೆಗೆ ಎಸ್‌ಐಟಿ ತಂಡವು ಧರ್ಮಸ್ಥಳ ವ್ಯಾಪ್ತಿಯಲ್ಲಿ ಉತ್ಖನನ ನಡೆಸುತ್ತಿತ್ತು. ಜುಲೈ 31ರಂದು ‘6ನೇ ಪಾಯಿಂಟ್‌’ ಎಂದು ಗುರುತಿಸಲಾದ ಸ್ಥಳದಲ್ಲಿ ಅಗೆದಾಗ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಈ ಕುರಿತು ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ್ ಅವರು ಆಗಸ್ಟ್ 1ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಅನ್ವಯ, ಅಸಹಜ ಸಾವು (ಯು.ಡಿ.ಆರ್. ಸಂಖ್ಯೆ 35/2025) ಪ್ರಕರಣವನ್ನು ಕಲಂ 174 (3) & (VI) ಸಿ.ಆರ್.ಪಿ.ಸಿ ಅಡಿಯಲ್ಲಿ ದಾಖಲಿಸಿಕೊಳ್ಳಲಾಗಿತ್ತು. ಇದೀಗ ಈ ಪ್ರಕರಣದ ತನಿಖಾ ಜವಾಬ್ದಾರಿಯನ್ನು ಸಂಪೂರ್ಣವಾಗಿ ಎಸ್‌ಐಟಿಗೆ ವಹಿಸಲಾಗಿದೆ. ಜಯಂತ್ ದೂರು ಸಹ ಹಸ್ತಾಂತರ: ಇದೇ ವೇಳೆ, ಬೆಳ್ತಂಗಡಿ ತಾಲ್ಲೂಕಿನ ಇಚಿಲಂಪಾಡಿ ನಿವಾಸಿ ಜಯಂತ್ ಟಿ. ಎಂಬುವವರು ನೀಡಿದ್ದ ದೂರು ಅರ್ಜಿಯನ್ನೂ ಎಸ್‌ಐಟಿಗೆ ವರ್ಗಾಯಿಸಲಾಗಿದೆ. ಜಯಂತ್ ಅವರು ಮೊದಲು ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ದೂರು ನೀಡಲು ತೆರಳಿದ್ದರು. ನಿಯಮಾನುಸಾರ, ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ, ಆಗಸ್ಟ್ 4ರಂದು ಧರ್ಮಸ್ಥಳ ಠಾಣೆಯಲ್ಲಿ ಅವರು ಸಲ್ಲಿಸಿದ್ದ ದೂರರ್ಜಿಯನ್ನು (ಸಂಖ್ಯೆ 200/DPS/2025) ಸ್ವೀಕರಿಸಲಾಗಿತ್ತು.

ಸರ್ಕಾರದ ಜೊತೆ ಕೈಜೋಡಿಸಿ: ಸಾರಿಗೆ ನೌಕರರಿಗೆ ಡಿ ಕೆ ಶಿವಕುಮಾ‌ರ್ ಮನವಿ

ಬೆಂಗಳೂರು: ಸಾರಿಗೆ ನೌಕರರ ಬೇಡಿಕೆ ನ್ಯಾಯಯುತವಾದದ್ದೇ. ಆದರೆ ಸರ್ಕಾರದ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ನೌಕರರಿಗೆ ನೆರವಾಗುವ ಮನಸ್ಥಿತಿಯನ್ನು ಸಿ ಎಂ, ಸಾರಿಗೆ ಸಚಿವರು ಹೊಂದಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಸಾರಿಗೆ ನೌಕರರ...

ಧರ್ಮಸ್ಥಳ: ನೂರಾರು ಶವ ಹೂತಿಟ್ಟ ಪ್ರಕರಣ; ಅಚ್ಚರಿಯ ಪಾಯಿಂಟ್‌ನಲ್ಲಿ ಸೀರೆ ಸೇರಿದಂತೆ ಮೂರು ಕಳೆಬರ...

ಬೆಳ್ತಂಗಡಿ: ಸೋಮವಾರ (ಆ.4) ಎಸ್‌ಐಟಿ ಕಾರ್ಯಾಚರಣೆಯ ವೇಳೆ ಕನಿಷ್ಠ ಮೂರು ಕಳೇಬರ ಪತ್ತೆಯಾಗಿದೆ ಅದರಲ್ಲಿ ಒಂದು ಕಳೇಬರ ಮಹಿಳೆಯದ್ದಾಗಿದೆ ಎಂದು, ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ...

ವಿಟ್ಲ: (ಆ.8) ವಿಶ್ವ ಹಿಂದು ಪರಿಷದ್‌ ಮಾತೃಮಂಡಳಿ, ದುರ್ಗಾವಾಹಿನಿ ಆಶ್ರಯದಲ್ಲಿ 31ನೇ ವರ್ಷದ ಸಾಮೂಹಿಕ...

ವಿಟ್ಲ: ವಿಶ್ವ ಹಿಂದು ಪರಿಷದ್‌ ಮಾತೃಮಂಡಳಿ, ದುರ್ಗಾವಾಹಿನಿ ವಿಟ್ಲ ಇದರ ಆಶ್ರಯದಲ್ಲಿ 31ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯು ಆಗಷ್ಟ್‌ 8-8-2025ನೇ ಶುಕ್ರವಾರ ಬೆಳಿಗ್ಗೆ 9:00 ಗಂಟೆಗೆ ವಿಟ್ಲ ಶ್ರೀ...

ಪಾವಂಜೆ ಬ್ರಿಡ್ಜ್‌ನಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು

ಪಾವಂಜೆ ಬ್ರಿಡ್ಜ್‌ನಿಂದ ನದಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ವ್ಯಕ್ತಿಯನ್ನು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೊಲೀಸರು ರಕ್ಷಿಸಿದ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಪಿ.ವಿ.ಎಸ್ ಕಲಾಕುಂಜದ ಬಳಿಯ ನಿವಾಸಿ ವಿಶ್ವನಾಥ ಶೆಟ್ಟಿ (75)...

ಉಡುಪಿ: ಕೂಲಿ ಕೆಲಸಕ್ಕೆ ತೆರಳಿದ ವ್ಯಕ್ತಿ ವಾಪಾಸು ಬಾರದೇ ನಾಪತ್ತೆ

ಉಡುಪಿ: ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ವ್ಯಕ್ತಿಯೋರ್ವ ನಾಪತ್ತೆಯಾದ ಘಟನೆ ಬ್ರಹ್ಮಾವರ ತಾಲೂಕು ಪೆಜಮಂಗೂರು ಗ್ರಾಮದ ಕೊಕ್ಕರ್ಣೆ ಕೆಳಪೇಟೆಯಲ್ಲಿ ನಡೆದಿದೆ. ನಾಪತ್ತೆಯಾದ ವ್ಯಕ್ತಿಯನ್ನು ಸುರೇಂದ್ರ ನಾಯ್ಕ(36) ಎಂದು ಗುರುತಿಸಲಾಗಿದೆ. ಸುರೇಂದ್ರ ನಾಯ್ಕ ಎಂಬವರು ಜೂ.28ರಂದು ಕೂಲಿ ಕೆಲಸಕ್ಕೆಂದು...

ವಿಟ್ಲ: (ಆ. 5-31) ಶ್ರೀ ಎನರ್ಜಿ ಸೋಲಾರ್‍ ಸಂಸ್ಥೆಯಲ್ಲಿ ಸೋಲಾರ್‌ ಉಪಕರಣಗಳ ಮೇಲೆ ವಿಶೇಷ...

ವಿಟ್ಲ: ವಿಟ್ಲ-ಮಂಗಳೂರು ಮುಖ್ಯ ರಸ್ತೆಯಲ್ಲಿ ಕಾರ್ಯನಿರ್ವಹಿಸುವ ಶ್ರೀ ಎನರ್ಜಿ ಸೋಲಾರ್‍ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣೇಶ ಚತಿರ್ಥಿಯ ಪ್ರಯುಕ್ತ ಗ್ರಾಹಕರಿಗೆ ಸೋಲಾರ್‌ ಉಪಕರಣಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗಿದೆ. ಆಗಸ್ಟ್‌ 5 ರಿಂದ...
error: Content is protected !!