Tuesday, July 21, 2026
spot_imgspot_img
spot_imgspot_img

ವೀರಕಂಭ: ಬಂಟರ ಸಂಘ ಕಲ್ಲಡ್ಕ ವಲಯ ಮಹಿಳಾ ಹಾಗೂ ಯುವ ವಿಭಾಗದ ಸಹಯೋಗದಲ್ಲಿ ಆಟಿದ ತಿಂಗೊಲ್ಡು ಬಂಟೆರ್‍ನ “ಕೆಸರ್‍ದ ಕಂಡೊಡು ಕುಸಾಲ್ದ ಗೊಬ್ಬು” ಕಾರ್ಯಕ್ರಮ

- Advertisement -
- Advertisement -

ಉದ್ಘಾಟನಾ ಕಾರ್ಯಕ್ರಮ-ಗೌರವ ಸಮರ್ಪಣೆ, ಸಮಾರೋಪ ಸಮಾರಂಭ

ವೀರಕಂಭ: ಬಂಟರ ಸಂಘ ಕಲ್ಲಡ್ಕ ವಲಯ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸಹಯೋಗದೊಂದಿಗೆ ಆಟಿದ ತಿಂಗೊಲ್ಡು ಬಂಟೆರ್‍ನ “ಕೆಸರ್‍ದ ಕಂಡೊಡು ಕುಸಾಲ್ದ ಗೊಬ್ಬು” ಕಾರ್ಯಕ್ರಮ ಆ. 3 ನೇ ಆದಿತ್ಯವಾರದಂದು ವೀರಕಂಭ ಗ್ರಾಮದ ಸೀಮ್ಲಾಜೆ ಗದ್ದೆಯಲ್ಲಿ ನಡೆಯಿತು. ಕಲ್ಲಡ್ಕ ವಲಯ ಬಂಟರ ಸಂಘ ಅಧ್ಯಕ್ಷರು ಗಣೇಶ್ ಶೆಟ್ಟಿ ಗೋಳ್ತಮಜಲು ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.

ಗಿರಿಧರ ರೈ. ಬೆಂಚ್ಚಂತ್ತಿಮಾರು ಗುತ್ತು, ಅನುವಂಶಿಕ ಆಡಳಿತ ಮೊಕ್ತೇಸರರು, ಶ್ರೀ ಉಳ್ಳಾಲ್ತಿ ದೈವಸ್ಥಾನ, ಕಲಿಂಜ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಗನ್ನಾಥ ಚೌಟ ಬದಿಗುಡ್ಡೆ, ಅಧ್ಯಕ್ಷರು, ಬಂಟರ ಸಂಘ ಬಂಟ್ವಾಳ ತಾಲೂಕು, ಕೆ. ಪದ್ಮನಾಭ ರೈ, ಗೌರವಾಧ್ಯಕ್ಷರು, ಕಲ್ಲಡ್ಕ ವಲಯ ಬಂಟರ ಸಂಘ, ಸಂದೀಪ್‌ ಶೆಟ್ಟಿ ಅರೆಬೆಟ್ಟು, ಅಧ್ಯಕ್ಷರು, ಬಂಟರ ಸಂಘ ವೀರಕಂಭ ಗ್ರಾಮ ಸಮಿತಿ, ಬಾಲಕೃಷ್ಣ ಆಳ್ವ ಬೊಂಡಾಲ, ಕಾಯಕಾರಿ ಸದಸ್ಯರು, ಬಂಟರ ಸಂಘ ಬಂಟ್ವಾಳ ತಾಲೂಕು, ಶ್ರೀಮತಿ ಪ್ರತಿಭಾ ಎ. ರೈ, ಕಾಯಕಾರಿ ಸದಸ್ಯರು, ಬಂಟರ ಸಂಘ, ಬಂಟ್ವಾಳ ತಾಲೂಕು, ಶ್ರೀಮತಿ ಸುಜಾತ ಪಿ. ರೈ, ಕಾರವಾರಿ ಸದಸ್ಯರು, ಬಂಬರ ಸಂಘ, ಬಂಟ್ವಾಳ ತಾಲೂಕು, ಶ್ರೀಮತಿ ನೀನಾ ಯು. ರೈ, ಅಧ್ಯಕ್ಷರು, ಮಹಿಳಾ ವಿಭಾಗ ಕಲ್ಲಣ್ಯ ಐಲಯ ಬಂಟರ ಸಂಘ, ಶ್ರೀ ಸುನಾದ್‌ರಾಜ್ ಶೆಟ್ಟಿ, ಅಧ್ಯಕ್ಷರು, ಯುವ ವಿಭಾಗ, ಕಲ್ಲಡ್ಕ ವಲಯ ಬಂಟರ ಸಂಘ ಇವರುಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಬಳಿಕ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮದಲ್ಲಿ ಜಗನ್ನಾಥ ಚೌಟ ಬದಿಗುಡ್ಡೆ, ಅಧ್ಯಕ್ಷರು, ಬಂಟರ ಸಂಘ ಬಂಟ್ವಾಳ ತಾಲೂಕು, ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಶ್ರೀ ದುರ್ಗಾ ಫೆಸಿಲಿಟಿ, ಮ್ಯಾನೇಜ್‌ಮೆಂಟ್‌ ಸರ್ವೀಸಸ್‌ ಪ್ರೈ.ಲಿ, ಬಂಟರ ಸಂಘ ಕಲ್ಲಡ್ಕ ವಲಯದ ಗೌರವಾಧ್ಯಕ್ಷರು ಪದ್ಮನಾಭ ರೈ ಕಲ್ಲಡ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಹಿರಿಯ ಸಾಧಕರಾದ ರಘು ಶೆಟ್ಟಿ ನಡುವಳಚ್ಚಿಲ್, ಬಾಲಕೃಷ್ಣ ಶೆಟ್ಟಿ ಕಂಬುಲ್‌ದಡ್ಡ, ಜಯಶೀಲ ಆಳ್ವ ವೀರಕಂಭ ಇವರನ್ನು ಗೌರವಿಸಲಾಯಿತು.

ಕ್ರೀಡಾ ಸಾಧಕರನ್ನು ಹಾಗೂ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಂಜೆ ಕಲ್ಲಡ್ಕ ವಲಯ ಬಂಟರ ಸಂಘದ ಅಧ್ಯಕ್ಷರು ಗಣೇಶ್ ಶೆಟ್ಟಿ ಗೋಳ್ತಮಜಲು ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ಡಾ. ಸುಜಯಾ ಭಂಡಾರಿ, ಆರೋಗ್ಯ ಅಧಿಕಾರಿ ದ.ಕ. ಜಿಲ್ಲೆ, ಸದಾನಂದ ಅಳ್ವ ಕಂಪ, ಕಾರ್ಯದರ್ಶಿಗಳು, ಬಂಟರ ಸಂಘ, ಬಂಟ್ವಾಳ ತಾಲೂಕು, ಐತಪ್ಪ ಆಳ್ವ ಸಜೀರುಗುತ್ತು, ಉಪಾಧ್ಯಕ್ಷರು, ಬಂಟರ ಸಂಘ ಬಂಟ್ವಾಳ ತಾಲೂಕು, ಲೋಕೇಶ್‌ ಶೆಟ್ಟಿ, ಕುಳ, ಕೋಶಾಧಿಕಾರಿ, ಬಂಟರ ಸಂಘ ಬಂಟ್ವಾಳ ತಾಲೂಕು, ಸಚ್ಚಿದಾನಂದ ಶೆಟ್ಟಿ, ಬೊಂಡಾಲ, ಶ್ರೀ ದುರ್ಗಾ ಫೆಸಿಲಿಟಿ, ಮ್ಯಾನೆಜ್ ಮೆಂಟ್ ಸರ್ವೀಸಸ್ ಪ್ರೈ.ಲಿ. , ಸಂತೋಷ್ ಶೆಟ್ಟಿ ಅರೆಬೆಟ್ಟು, ಮಾತಾ ಡೆವಲಪರ್, ಮಂಗಳೂರು, ಶ್ರೀಧರ ಶೆಟ್ಟಿ ಪುಳಿಂಚ, ಖ್ಯಾತ ನ್ಯಾಯವಾದಿಗಳು, ಮಂಗಳೂರು, ಡಾ. ರಾಮಕೃಷ್ಣ ಶೆಟ್ಟ ಗೋಳ್ತಮಜಲು. ರಕ್ಷಾ ಕ್ಲೀನಿಕ್ ತೊಕ್ಕೊಟ್ಟು, ಸಂದೇಶ್ ಶೆಟ್ಟಿ ಅರೆಬೆಟ್ಟು, ಆಗ್ರಹ ಬಿಲ್ಡರ್, ಮಂಗಳೂರು, ಶಶಿಧರ ಮಾರ್ಲ, ಬೊಂಡಾಲ ಅಂತರಗುತ್ತು, ಉದ್ಯಮಿ, ಮಂಗಳೂರು, ದಾಮೋದರ ಶೆಟ್ಟಿ ಸುದೆಕ್ಕಾರು. ಉದ್ಯಮಿ, ರಾಮ್‌ದಾಸ್‌ ಶೆಟ್ಟಿ. ಪಾತ್ರತೋಟ, ಅಧ್ಯಕ್ಷರು, ಕರ್ನಾಟಕ ಜರ್ನಲಿಸ್ಟ್ ಯೂನಿಯನ್, ಪುತ್ತೂರು ತಾಲೂಕು, ದಿವಾಕರ ಶೆಟ್ಟಿ , ಸುದೆಕ್ಕಾರು, ಅಧ್ಯಕ್ಷರು ರೋಟರಿ ಕ್ಲಬ್ ಬಿ.ಸಿ.ರೋಡು, ಲೋಹಿತಾಕ್ಷ ಭಂಗ, ಮುಡಿಮಾರು. ಅಧ್ಯಕ್ಷರು ಲಯನ್ಸ್ ಕ್ಲಬ್‌ ಬಂಟ್ವಾಳ, ಚರಣ್ ಶೆಟ್ಟಿ. ಅಬೀರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಂಕರ ಶೆಟ್ಟಿ ನಡ್ಯೋಡಿ ಗುತ್ತು, ಅಧ್ಯಕ್ಷರು ಬಂಟರ ಸಂಘ ಬಿ ಸಿ ರೋಡ್‌ ವಲಯ, ವಿಶ್ವನಾಥ ಶೆಟ್ಟಿ ಕೊಟ್ಟಿಂಜ, ಅಧ್ಯಕ್ಷರು ಬಂಟರ ಸಂಘ ಪರಂಗಿಪೇಟೆ ವಲಯ, ರಾಧಕೃಷ್ಣ ರೈ ಪೊಳಲಿ ಅಧ್ಯಕ್ಷರು ಬಂಟರ ಸಂಘ ಬೆಳ್ಳೂರು ವಲಯ, ಜಯಾನಂದ ಶೆಟ್ಟಿ ಪಜೀರು ಅಧ್ಯಕ್ಷರು ಬಂಟರ ಸಂಘ ಮುಡಿಪು ವಲಯ, ಜಗದೀಶ್‌ ಶೆಟ್ಟಿ ಇರಾಗುತ್ತು, ಅಧ್ಯಕ್ಷರು ಬಂಟರ ಸಂಘ ಇರಾ ವಲಯ, ಉದಯ್‌ ಕುಮಾರ್‌ ರೈ ಅಗರಿ ಅಧ್ಯಕ್ಷರು ಬಂಟರ ಸಂಘ ಸಾಲೆತ್ತೂರು ವಲಯ, ರಾಜೀವ ಭಂಡಾರಿ ಕುಂಡಕೋಳಿ ಅಧ್ಯಕ್ಷರು ಬಂಟರ ಸಂಘ ವಿಟ್ಲ ವಲಯ, ಮಾಧವ ರೈ ಅಮೈ, ಅಧ್ಯಕ್ಷರು ಬಂಟರ ಸಂಘ ಮಾಣಿ ವಲಯ, ದಯಾನಂದ ಶೆಟ್ಟಿ ಅಮೈ ಅಧ್ಯಕ್ಷರು ಬಂಟರ ಸಂಘ ಸರಪಾಡಿ ವಲಯ, ವಸಂತ ಶೆಟ್ಟಿ ಕೇದಗೆ ಅಧ್ಯಕ್ಷರು ಬಂಟರ ಸಂಘ ವಾಮದಪದವು ವಲಯ, ಸುರೇಶ್‌ ಶೆಟ್ಟಿ ಕೋಯಮಜಲು ಅಧ್ಯಕ್ಷರು ಬಂಟರ ಸಂಘ ಕಾವಳಕಟ್ಟೆ ವಲಯ, ರಾಜೇಶ್‌ ಶೆಟ್ಟಿ ರಾಯಶೀತಲ ಅಧ್ಯಕ್ಷರು ಬಂಟರ ಸಂಘ ಸಿದ್ಧಕಟ್ಟೆ ವಲಯ ವಿಶೇಷ ಆಹ್ವಾನಿತ ಅತಿಥಿಗಳಾಗಿ ಪಾಲ್ಗೊಂಡರು.

ಆಟೋಟ ಸ್ಪರ್ಧೆಯ ತೀರ್ಪುಗಾರರಾಗಿ ಜಗದೀಶ್‌ ರೈ ನಡುವಳಚ್ಚಿಲ್‌, ಅಜಿತ್‌ ಶೆಟ್ಟಿ ನರಿಕೊಂಬು, ಶರ್ಮಿಳಾ ಶೆಟ್ಟಿ ಪಾತ್ರೆತೋಡಿ, ಆನಂದ ಶೆಟ್ಟಿ ಕಾಂಪ್ರಬೈಲು, ಸಹಕರಿಸಿದರು. ನಾಗೇಶ್‌ ಶೆಟ್ಟಿ ಬೊಂಡಾಲ ಕಾರ್ಯಕ್ರಮ ನಿರೂಪಿಸಿದರು.

ಕಲ್ಲಡ್ಲ ವಲಯ ಬಂಟರ ಸಂಘದ ಪದಾಧಿಕಾರಿಗಳು, ಕಲ್ಲಡ್ಕ ವಲಯ ಮಹಿಳಾ ವಿಭಾಗದ ಪದಾಧಿಕಾರಿಗಳು, ಗ್ರಾಮ ಸಮಿತಿಯ ಅಧ್ಯಕ್ಷರುಗಳು, ಗ್ರಾಮ ಮಹಿಳಾ ಸಮಿತಿಯ ಅಧ್ಯಕ್ಷರುಗಳು, ಗ್ರಾಮ ಯುವ ಸಮಿತಿಯ ಅಧ್ಯಕ್ಷರುಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಉಪಸ್ಥಿತರಿದ್ದರು.

- Advertisement -

Related news

error: Content is protected !!