Monday, April 19, 2021
spot_imgspot_img
spot_imgspot_img

ತಾಯಿಫ್ ಚಾಂಪಿಯನ್ಸ್ ಲೀಗ್ – ಕೆಎ19 ರೈಡರ್ಸ್ ಮಂಗಳೂರು TCL -3 – 2020 ಚಾಂಪಿಯನ್

ತಾಯಿಫ್: ತಾಯಿಫ್ ಫೈಟರ್ಸ್ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ತಾಯಿಫ್ ಚಾಂಪಿಯನ್ಸ್ ಲೀಗ್ TPL – 3 – 2020 ಈ ಪಂದ್ಯಾಕೂಟದಲ್ಲಿ ಬಲಿಷ್ಠ ನಾಲ್ಕು ತಂಡಗಳಾದ ದಿ.ಕೆ ವಾರಿಯರ್ಸ್ ವಿಟ್ಲ , ಕಿಲಾಡಿ ಗೈಸ್ ಕಾಸರಗೋಡು , ಅರಬ್ ಬಾಯ್ಸ್ ಗುರುಪುರ ಹಾಗೂ ಕೆಎ19 ರೈಡರ್ಸ್ ಮಂಗಳೂರು ಮದ್ಯೆ ನಾಲ್ಕು ವಾರಗಳಿಂದ ಜೂರಿ ಮೋಳ್ ಕ್ರೀಡಾಂಗಣದಲ್ಲಿ ನಡೆದ ಜಿದ್ದಾಜಿದ್ದಿನ ರೋಮಾಂಚಕ ಹಣಾಹಣಿಯು ಯಶಸ್ವಿಯಾಗಿ ಅಂತ್ಯಗೊಂಡಿತು.

ಇದರೊಂದಿಗೆ ಪ್ರಸಕ್ತ 2020 ಸಾಲಿನ ಸೀಸನ್ 3 ಚಾಂಪಿಯನ್ ತಂಡವಾಗಿ ‘ಕೆಎ19 ರೈಡರ್ಸ್ ಮಂಗಳೂರು’ ಹೊರಹೊಮ್ಮಿದೆ.ಲೀಗ್ ಪಂದ್ಯಾಕೂಟದ ನಾಲ್ಕು ತಂಡಗಳ ಪ್ರತಿ ಪಂದ್ಯವು ಬಹಳ ಪೈಪೋಟಿಯಿಂದ ಸಾಗಿ, ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸಲೀಮ್ ಸೂರಿಂಜೆ (ಕೋಟಾ) ನಾಯಕತ್ವದ ಕೆಎ19 ರೈಡರ್ಸ್ ಮಂಗಳೂರು ಮತ್ತು ಫವಾಝ್ ಬಾಯರ್ ಮುನ್ನಡೆಸುವ ಕಿಲಾಡಿ ಗೈಸ್ ಕಾಸರಗೋಡು ತಂಡವು ಮುಖ-ಮುಖಿಯಾಯಿತು.

ವೈಯಕ್ತಿಕ ಶ್ರೇಷ್ಠ ಮಟ್ಟದ ಪ್ರದರ್ಶನಕ್ಕಾಗಿ ಉತ್ತಮ ದಾಂಡಿಗ ಇರ್ಶಾದ್ ಸುಳ್ಯ, ಉತ್ತಮ ದಾಳಿಗಾರ ಅಚ್ಚು ಬಂದಿಯೂಡ್, ಉತ್ತಮ ವಿಕೆಟ್ ಕೀಪರ್ ಸಾಬಿತ್ ಮನಾಲ್, ಉತ್ತಮ ಕ್ಷೇತ್ರರಕ್ಷಕ ಶಫೀಕ್ ಮಂಜೇಶ್ವರ ಸವ್ಯಸಾಚಿ ಆಟಗಾರ ಸಲೀಮ್ ಸೂರಿಂಜೆ ರವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಅದೇ ರೀತಿ ಫೈನಲ್ ಪಂದ್ಯಾಟದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಅವಿನಾಶ್ ಕೊಣಾಜೆ ತನ್ನದಾಗಿಸಿದರು.

- Advertisement -

MOST POPULAR

HOT NEWS

Related news

error: Content is protected !!