Friday, March 29, 2024
spot_imgspot_img
spot_imgspot_img

ಇಂದಿನಿಂದ ತಲಕಾಡು ಪಂಚಲಿಂಗ ದರ್ಶನ-ಎಲ್ಲರ ಚಿತ್ತ ತಲಕಾಡಿನತ್ತ!

- Advertisement -G L Acharya panikkar
- Advertisement -

ಮೈಸೂರು: ಇತಿಹಾಸ ಪ್ರಸಿದ್ಧ ತಲಕಾಡಿನಲ್ಲಿ ಇಂದಿನಿಂದ 10 ದಿನಗಳ ಕಾಲ ಐತಿಹಾಸಿಕ ತಲಕಾಡು ಪಂಚಲಿಂಗ ದರ್ಶನ ನಡೆಯಲಿದೆ. ಸುಮಾರು 7 ವರ್ಷಗಳ ಬಳಿಕ ಈ ಪಂಚಲಿಂಗ ದರ್ಶನ ನಡೆಯುತ್ತಿದೆ. ವೈದ್ಯನಾಥೇಶ್ವರ, ಅರ್ಕೇಶ್ವರ, ಪಾತಾಳೇಶ್ವರ, ಮರಳೇಶ್ವರ, ಮಲ್ಲಿಕಾರ್ಜುನೇಶ್ವರ ಈ 5 ದೇವಾಲಯಗಳಲ್ಲಿ ಈ ಪಂಚಲಿಂಗ ದರ್ಶನ ಇರುತ್ತದೆ.

ಇಂದು ಸಂಜೆ 6.30ರಿಂದ ಪಂಚಲಿಂಗ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ವೈದ್ಯನಾಥೇಶ್ವರ ದೇವಾಲಯದಿಂದ ಪಂಚಲಿಂಗ ದರ್ಶನಕ್ಕೆ ಚಾಲನೆ ನೀಡಲಾಗುತ್ತದೆ. ಮೊದಲ ಪೂಜೆ ಸಲ್ಲಿಸಿದ ಬಳಿಕ ಪಂಚಲಿಂಗ ದರ್ಶನಕ್ಕೆ ಅವಕಾಶ ಕೊಡಲಾಗುತ್ತದೆ. 

ವಿಶೇಷವೇನೆಂದರೆ ಅಪರೂಪಕ್ಕೆ 5 ಕಾರ್ತಿಕ ಸೋಮವಾರ ಬರುವ ವರ್ಷದಲ್ಲಿ ಈ ಪಂಚಲಿಂಗ ದರ್ಶನವು ನಡೆಯುತ್ತದೆ.  2013ರಲ್ಲಿ 5 ಕಾರ್ತಿಕ ಸೋಮವಾರ ಬಂದಿದ್ದಾಗ ಪಂಚಲಿಂಗ ದರ್ಶನ ನಡೆದಿತ್ತು. 7 ವರ್ಷಗಳ ಬಳಿಕ ಮತ್ತೆ ಬಂದ 5 ಕಾರ್ತಿಕ ಸೋಮವಾರದ ಹಿನ್ನೆಲೆ ಇಂದಿನಿಂದ ಪಂಚಲಿಂಗ ದರ್ಶನ ಆಚರಣೆ ನಡೆಯಲಿದೆ.

ಕೊರೋನಾ ಹಿನ್ನೆಲೆ  ಈ ಬಾರಿ ಸರಳವಾಗಿ ಪಂಚಲಿಂಗ ದರ್ಶನ ಆಚರಣೆ ಇರುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಕೇವಲ 1000 ಮಂದಿ ಮಾತ್ರ ಪಂಚಲಿಂಗ ದರ್ಶನದಲ್ಲಿ  ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ತಾಂತ್ರಿಕ ಸಲಹಾ ಸಮಿತಿ ಮಾರ್ಗಸೂಚಿಯಂತೆ ಪಂಚಲಿಂಗ ದರ್ಶನ ಆಚರಣೆ ನಡೆಸಲಾಗುತ್ತಿದೆ.

ಪಂಚಲಿಂಗ ದರ್ಶನದ ವೇಳೆ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕಿದ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್​ ಧರಿಸಿರಬೇಕು. ಮಾಸ್ಕ್​  ಧರಿಸದೆ ಬಂದವರಿಗೆ ಪಂಚಲಿಂಗ ದರ್ಶನ ಇಲ್ಲ.

- Advertisement -

Related news

error: Content is protected !!