ಮಂಗಳೂರು: ಕೇರಳಿಗರು ಪ್ರತಿನಿತ್ಯ ಮಂಗಳೂರು ಪ್ರಯಾಣಿಸುವುದಕ್ಕೆ ಕೇರಳ ಸರ್ಕಾರ ನಿಷೇಧ ಹೇರಿರುವುದರ ಪರಿಣಾಮ ಗಡಿಭಾಗ ತಲಪಾಡಿಯಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.ಪ್ರತಿನಿತ್ಯ ಕೆಲಸಕ್ಕೆ ಹೋಗುತ್ತಿದ್ದ ಜನರಿಗೆ ಕೇರಳದ ದಿಢೀರ್ ನಿರ್ಧಾರ ಅಘಾತ ತರಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇರಳದಿಂದ ಮಂಗಳೂರಿಗೆ ಕೆಲಸಕ್ಕೆ ಬರುವವರನ್ನು ಪೊಲೀಸರು ಪೊಲೀಸರು ತಡೆದಿದ್ದು, ಸಾರ್ವಜನಿಕರು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.ಸ್ಥಳದಲ್ಲಿ 100ಕ್ಕೂ ಅಧಿಕ ಸಂಖ್ಯೆಯಲ್ಲಿ ಕಾಸರಗೋಡಿಗರು ಜಮಾಯಿಸಿದ್ದು ತಲಪಾಡಿ ಟೋಲ್‌ಗೇಟ್ ಬಳಿ ಗುಂಪುಗೂಡಿದ್ದಾರೆಂದು ತಿಳಿದುಬಂದಿದೆ.


ತಲಪಾಡಿ ಗಡಿಯಲ್ಲಿ ಜಮಾಯಿಸಿದ ಜನರು ಕೇರಳಿಗರು ಪ್ರತಿನಿತ್ಯ ಮಂಗಳೂರು ಪ್ರಯಾಣಿಸುವುದಕ್ಕೆ ಕೇರಳ ಸರ್ಕಾರ ನಿಷೇಧ ಹೇರಿದೆ. ಮಂಗಳೂರು ಪ್ರವೇಶಕ್ಕೆ ಕೇರಳದಿಂದ ಕೊಡುತ್ತಿದ್ದ ನಿತ್ಯದ ಪಾಸ್ ರದ್ದುಮಾಡಿದೆ. ದ.ಕ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.ಕೇರಳದ ಕಾಸರಗೋಡು, ಮಂಜೇಶ್ವರ ಭಾಗದಿಂದ ಮಂಗಳೂರಿಗೆ ಬರುತ್ತಿದ್ದ ಜನರು, ಉದ್ಯೋಗ ಮತ್ತು ವ್ಯಾಪಾರದ ಹಿನ್ನೆಲೆ ನಿತ್ಯದ ಪಾಸ್ ಬಳಸಿ ಪ್ರಯಾಣ ಮಾಡುತ್ತಿದ್ದರು.

ಹಾಗೇ ಮಂಗಳೂರಿಗೆ ಬಂದು ಹೋದ ಐದು ಮಂದಿ ಕೇರಳಿಗರಿಗೆ ಕೊರೋನಾ ಪಾಸಿಟಿವ್ ಆಗಿತ್ತು. ಇನ್ನು ಮುಂದೆ ತಿಂಗಳಿಗೊಮ್ಮೆ ಮಾತ್ರ ಮಂಗಳೂರಿಗೆ ಪ್ರಯಾಣಿಸಬಹುದು. ಅಥವಾ ಮಂಗಳೂರಿನಲ್ಲೇ ಉಳಿದುಕೊಂಡು 28 ದಿನಕ್ಕೊಮ್ಮೆ ಕೇರಳಕ್ಕೆ ಬಂದು ಹೋಗಬಹುದು ಎಂದು ಸರ್ಕಾರ ಹೇಳಿದೆ.ಇದು ದಿನ ನಿತ್ಯ ಪಾಸ್ ಮುಖೇನ ಕೆಲಸಕ್ಕೆ ತೆರಳುತ್ತಿದ್ದ ಕೇರಳಿಗರಿಗೆ ತೊಂದರೆಯಾಗಿದೆ.
