- Advertisement -
- Advertisement -
ಆಕೆಗೆ ತ್ರಿವಳಿ ತಲಾಖ್ ನೀಡಿ ವಿಚ್ಛೇದನ ನೀಡಿದ್ದ ವ್ಯಕ್ತಿ ಆಕೆಯನ್ನು ಮತ್ತೆ ಪೀಡಿಸಿದ್ದಾನೆ.! ಆಕೆಯ ಅಶ್ಲೀಲ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಭೂಪ.! ಇದರಿಂದ ನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗು ತಬ್ಬಲಿಯಾಗಿದೆ...
ಈ ಘಟನೆ ನಡೆದಿರೋದು ಫರ್‌ನಗರ ಜಿಲ್ಲೆಯ ಕೃಷ್ಣನಗರ ಎಂಬಲ್ಲಿ. ನಾಲ್ಕು ವರ್ಷಗಳ ಹಿಂದೆ ಈ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ ಪತಿರಾಯ ಮೂರು ತಿಂಗಳ ಹಿಂದೆ ತ್ರಿವಳಿ ತಲಾಖ್ ನೀಡುವ ಮೂಲಕ ವಿಚ್ಛೇದನ ನೀಡಿದ್ದನು.
ಇಷ್ಟಕ್ಕೆ ಸುಮ್ಮನಾಗದ ಆರೋಪಿ ಅವಳ ಅಶ್ಲೀಲ ವಿಡಿಯೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನು. ಇದರಿಂದ ನೊಂದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 18 ತಿಂಗಳ ಮಗು ಇದೆ ಇಂದು ತಬ್ಬಲಿಯಾಗಿದೆ. ಈ ಕುರಿತು ಮುಜಾಫರ್‌ನಗರದ ಭೋಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -