Friday, May 3, 2024
spot_imgspot_img
spot_imgspot_img

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ನರರಾಕ್ಷಸರು; ಕಣ್ಣು, ಉಗುರುಗಳನ್ನು ಕಿತ್ತು ಕ್ರೂರವಾಗಿ ಹತ್ಯೆ!

- Advertisement -G L Acharya panikkar
- Advertisement -

ಬಿಹಾರ: 8 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕಿ ತನ್ನ ತಂದೆಯೊಂದಿಗೆ ಮೀನುಗಾರಿಕೆಗೆ ತೆರಳಿ ಒಬ್ಬಳೇ ವಾಪಸಾಗುವ ವೇಳೆ ನರರಾಕ್ಷಸರು ಈ ಕೃತ್ಯ ಎಸಗಿದ್ದಾರೆ. ತಂದೆ ಮನೆಗೆ ವಾಪಾಸಾದ ಸಮಯದಲ್ಲಿ ಮಗಳು ಇನ್ನೂ ಬಂದಿಲ್ಲವೆಂದು ಹುಡುಕಾಟ ನಡೆಸಿದಾಗ ಇಟ್ಟಿಗೆ ತಯಾರಿಕಾ ಘಟಕದ ಬಳಿ ಸಂತ್ರಸ್ತೆಯ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ: ಉಡುಪಿ: ಬಾರ್ ಬಿಲ್ ನೀಡದ ಕಾರಣಕ್ಕೆ ಸ್ನೇಹಿತನ ಮೇಲೆ ಹಲ್ಲೆ!

ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅತ್ಯಾಚಾರದ ಬಳಿಕ ಕಾಮುಕರು ಆಕೆಯ ಕಣ್ಣು ಮತ್ತು ಉಗುರುಗಳನ್ನು ಕಿತ್ತು ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ. ಆರೋಪಿಗಳಿಗಾಗಿ ಪತ್ತೆ ಕಾರ್ಯ ಆರಂಭಿಸಿದ್ದಾರೆ.

- Advertisement -

Related news

error: Content is protected !!