Tuesday, June 16, 2026
spot_imgspot_img
spot_imgspot_img

ವೈವಾಹಿಕ ಜೀವನಕ್ಕೆ ಕಾಲಿಟ್ಟ ತರುಣ್​ ಸುಧೀರ್​- ಸೋನಲ್ ಮೊಂಥೆರೋ

- Advertisement -
- Advertisement -

ಸ್ಯಾಂಡಲ್​ವುಡ್​​ ಸ್ಟಾರ್​ ಡೈರೆಕ್ಟರ್​​ ತರುಣ್‌ ಕಿಶೋರ್‌ ಸುಧೀರ್‌ ಹಾಗೂ ಕನ್ನಡದ ನಟಿ ಸೋನಲ್‌ ಮೊಂತೆರೊ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರು, ಸ್ನೇಹಿತರು, ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್‌ ಮದುವೆಯಾಗಿದ್ದಾರೆ.

ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ದೂರಿಯಾಗಿ ಇಬ್ಬರ ವಿವಾಹ ಸಮಾರಂಭ ನಡೆಯಿತು. ಹಿಂದೂ ಸಂಪ್ರದಾಯದಂತೆ ಎರಡು ಕುಟುಂಬದ ಗುರು – ಹಿರಿಯರ ಸಮ್ಮುಖದಲ್ಲಿ ನವಜೋಡಿ ಹೊಸ ಜೀವನಕ್ಕೆ ಕಾಲಿಟ್ಟರು. ಬೆಳಗ್ಗೆ 10:50 ರಿಂದ 11:35 ಸಮಯದ ತುಲಾ ಲಗ್ನದಲ್ಲಿ ಮಾಂಗಲ್ಯ ಧಾರಣೆ ನೆರವೇರಿತು.

ಇನ್ನು ಸ್ಟಾರ್ ಗಳ ವಿವಾಹ ಸಮಾರಂಭದಲ್ಲಿ ಹಿರಿಯ ನಟಿ ಶ್ರುತಿ, ಸುಧಾರಾಣಿ, ಮಾಳವಿಕ ಅವಿನಾಶ್, ನಟ ಅವಿನಾಶ್, ಮೇಘನಾ ಗಾಂಲ್ಕರ್, ಪ್ರೇಮ್, ಅಮೃತಾ ಪ್ರೇಮ್, ನಟಿ ನಿಶ್ವಿಕಾ ನಾಯ್ಡು, ನಟಿ ಆಶಿಕಾ ರಂಗನಾಥ್, ನಟ ಸಾಧುಕೋಕಿಲಾ, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ತೆಲುಗು ನಟ ಜಗಪತಿ ಬಾಬು, ನಟ ಶರಣ್, ಗೋಲ್ಡನ್ ಸ್ಟಾರ್ ಗಣೇಶ್, ನಟ ವಿನೋದ್ ರಾಜ್, ಗಾಯಕ ಚೇತನ್, ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಹಲವು ಸ್ಯಾಂಡಲ್ ವುಡ್ ತಾರೆಯರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಭಾಗಿಯಾಗಿದ್ದರು.

- Advertisement -

Related news

error: Content is protected !!