Friday, April 26, 2024
spot_imgspot_img
spot_imgspot_img

ಅಕ್ಟೋಬರ್ 15 ರಿಂದ ಥಿಯೇಟರ್​ತೆರೆಯಲು ಕೇಂದ್ರ ಸರ್ಕಾರ ಅನುಮತಿ

- Advertisement -G L Acharya panikkar
- Advertisement -

ನವದೆಹಲಿ: ಅಕ್ಟೋಬರ್ 15 ರಿಂದ ಥಿಯೇಟರ್​ಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದೀಗ ಸಿನಿಮಾ ಥಿಯೇಟರ್​​ಗಳ ರೀ ಓಪನ್​ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸದೊಂದು ಮಾರ್ಗಸೂಚಿ ಹೊರಡಿಸಿದೆ.

ಒಂದೇ ಸಮಯದಲ್ಲಿ ಹಲವು ಶೋ ಗಳನ್ನು ಮಾಡುವಂತಿಲ್ಲ. ಸಿನಿಮಾದ ಆರಂಭಕ್ಕೂ ಮುನ್ನ, ಇಂಟರ್ವೆಲ್ ಮುನ್ನ ಹಾಗೂ ನಂತರ ಕೊರೊನ ಬಗ್ಗೆ ಜಾಗ್ರತಿ ಮೂಡಿಸುವ ಒಂದು ನಿಮಿಷದ ವಿಡಿಯೋ ಅಥವಾ ಪ್ರಕಟಣೆ ಪ್ರಸಾರ ಮಾಡಬೇಕು. ಪ್ಯಾಕ್ ಮಾಡಲಾದ ಆಹಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ.

ಬಾಕ್ಸ್ ಆಫೀಸ್ ಹಾಗೂ ಇತರೆ ಸ್ಥಳಗಳನ್ನ ನಿಯಮಿತವಾಗಿ ಸ್ಯಾನಿಟೈಸ್ ಮಾಡಬೇಕು. ಇಂಟರ್ವೆಲ್ ಸಂದರ್ಭದಲ್ಲಿ ವೀಕ್ಷಕರು ಹೆಚ್ಚಾಗಿ ಓಡಾಟ ಮಾಡದಂತೆ ನೋಡಿಕೊಳ್ಳಬೇಕು. ಪ್ರತಿ ಸೀಟ್ ಮದ್ಯೆ ಒಂದು ಸೀಟ್ ಬಿಡಬೇಕು ಥಿಯೇಟರ್ ನ ಅರ್ಧದಷ್ಟು ಸೀಟ್ ಗಳು ಬಳಕೆಗೆ ಅವಕಾಶ. ಪ್ರೇಕ್ಷಕರು ಒಂದು ಸೀಟ್ ಗ್ಯಾಪ್ ಬಿಟ್ಟು ಕೂರಬೇಕು. ಥಿಯೇಟರ್ ನಲ್ಲಿ ಎಸಿ 24-30 ಸೆಂಟಿಗ್ರೇಡ್ ಇರಬೇಕು. ಆನ್ಲೈನ್ ಮೂಲಕ ಟಿಕೆಟ್ ಬುಕಿಂಗ್ ಗೆ ಹೆಚ್ಚಿನ ಆದ್ಯತೆ. ಪ್ರತಿ ಶೋ ಆರಂಭಕ್ಕೂ ಮುನ್ನ ಸ್ಯಾನಿಟೈಸೇಷನ್. ಥಿಯೇಟರ್ ಫುಲ್ ಸ್ಯಾನಿಟೈಸೇಷನ್ ಮಾಡತಕ್ಕದ್ದು. ಥಿಯೇಟರ್ ಸಿಬ್ಬಂದಿಗೆ ಪ್ರತ್ಯೇಕ ಡ್ರೆಸ್ ಕೋಡ್. ಥಿಯೇಟರ್ ಸಿಬ್ಬಂದಿಗೆ ಮಾಸ್ಕ್, ಹ್ಯಾಂಡ್ ಗ್ಲೋಸ್ ಕಡ್ಡಾಯ. ಪ್ರತಿ ಪ್ರೇಕ್ಷಕರ ಮೊಬೈಲ್ ನಲ್ಲಿ ಆರೋಗ್ಯ ಸೇತು ಇರಬೇಕು, ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.

- Advertisement -

Related news

error: Content is protected !!