Tuesday, June 9, 2026
spot_imgspot_img
spot_imgspot_img

ಇಂಜಿನ್‌ನಲ್ಲಿ ತಾಂತ್ರಿಕ ದೋಷ: ಬ್ರೆಜಿಲ್‌ನಲ್ಲಿ ನೇರವಾಗಿ ರಸ್ತೆಗಿಳಿದ ವಿಮಾನ

- Advertisement -
- Advertisement -

ಬ್ರೆಜಿಲ್: ವಿಮಾನವೊಂದರ ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ನೂರಾರು ವಾಹನಗಳು ಓಡಾಡುವ ರಸ್ತೆಯಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಬ್ರೆಜಿಲ್‌ನ ಸಾಂತಾ ಕ್ಯಾಟರಿನಾದಲ್ಲಿ ನಡೆದಿದೆ.

ಗೌರಮಿರಿಮ್‌ನಲ್ಲಿರುವ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ವಿಮಾನವು ಸ್ಪಲ್ಪ ದೂರ ಹಾರುತ್ತಿದ್ದಂತೆ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತುರ್ತು ಕ್ರಮವಾಗಿ ಪೈಲಟ್ ಗುರುವದ ಬಿಆರ್-1010 ಹೆದ್ದಾರಿ ಮೇಲೆ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಿಂಗಲ್ ಇಂಜಿನ್ ಹೊಂದಿರುವ ಪೆಲಿಕನ್ 500ಬಿಆರ್ ವಿಮಾನದಲ್ಲಿ ಕಾಣಿಸಿಕೊಂಡ ಇಂಜಿನ್ ವೈಫಲ್ಯದಿಂದ ತುರ್ತು ಭೂಸ್ಪರ್ಶ ಮಾಡಲಾಯಿತು. ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದರು. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಮಾನ ತುರ್ತು ಲ್ಯಾಂಡ್ ಮಾಡುತ್ತಿರುವ ದೃಶ್ಯವನ್ನು ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಅದೃಷ್ಟವಶಾತ್ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಯಾವುದೇ ವಾಹನಗಳಿಗೆ ಹಾನಿಯುಂಟಾಗಿಲ್ಲ.

- Advertisement -

Related news

error: Content is protected !!