Tuesday, June 23, 2026
spot_imgspot_img
spot_imgspot_img

ಮಧೂರು: (ಮಾ.27-ಏ.7) ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ

- Advertisement -
- Advertisement -

ಮಧೂರು: ಇತಿಹಾಸ ಪ್ರಸಿದ್ಧ ಕಾಸರಗೋಡು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯು ಮಾರ್ಚ್ 27-3-2025ನೇ ಗುರುವಾರದಿಂದ 7-4-2025ನೇ ಸೋಮವಾರದವರೆಗೆ ನಡೆಯಲಿದೆ.

ದಿನಾಂಕ:27-03-2025ನೇ ಗುರುವಾರ ಬೆಳಿಗ್ಗೆ 8:00 ರಿಂದ ಬ್ರಹ್ಮಶ್ರೀ ಡಾ. ಶಿವಪ್ರಸಾದ್ ತಂತ್ರಿ ದೇರೆಬೈಲು, ಕ್ಷೇತ್ರ ತಂತ್ರಿವರ್ಯರು ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, ವಾಸ್ತುಶಿಲ್ಪಿ ಶ್ರೀ ಪ್ರಸಾದ ಮುನಿಯಂಗಳ ಇವರಿಗೆ ಶಿಲ್ಪಿ ಮರ್ಯಾದೆ, ಪ್ರಾಸಾದ ಪರಿಗ್ರಹ, ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಶ್ರೀ ದೇವರ ಉಗ್ರಾಣ ಮುಹೂರ್ತ, ಅನ್ನಸಂತರ್ಪಣೆಯ ಉಗ್ರಾಣ ಮುಹೂರ್ತ, ಆಚಾರ್ಯಾದಿ ಋತಿಗ್ಗರಣೆ, ಬ್ರಹ್ಮಕೂರ್ಚ ಹೋಮ, ಕಂಕಣಬಂಧ, ಅಥರ್ವಶೀರ್ಷ ಮಹಾಗಣಪತಿ ಯಾಗ ನಡೆಯಲಿದೆ. ಸಂಜೆ 5:00 ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೆಘ್ನಹೋಮ, ವಾಸ್ತುಹೋಮ, ವಾಸ್ತುಪೂಜೆ, ವಾಸ್ತುಬಲಿ, ಪ್ರಾಕಾರ ಬಲಿ, ಮೃತ್ತಿಕಾಹರಣ, ಅಂಕುರಾರೋಪಣ ನಡೆಯಲಿದೆ.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಬಿ. ಎಸ್. ರಾವ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀಮದ್ ಎಡನೀರು ಮಠ, ಪರಮಪೂಜ್ಯ ಪದ್ಮ ವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ, ಪರಮಪೂಜ್ಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಜಗದ್ಗುರು ಶ್ರೀಮದ್‌ ಮಧ್ವಾಚಾರ್ಯ ಮೂಲಮಹಾಸಂಸ್ಥಾನ, ಶ್ರೀ ಪಲಿಮಾರು ಮಠ, ಉಡುಪಿ ಆಶೀರ್ವಚನ ನೀಡಲಿದ್ದಾರೆ. ಶ್ರೀಕ್ಷೇತ್ರ ತಂತ್ರಿವರ್ಯರು ಬ್ರಹ್ಮಶ್ರೀ ಡಾ. ಶಿವಪ್ರಸಾದ ತಂತ್ರಿ ದೇರೆಬೈಲು, ಶ್ರೀ ಕ್ಷೇತ್ರದ ಶಿಲ್ಪಿ ಶ್ರೀ ಪ್ರಸಾದ್ ಮುನಿಯಂಗಳ ದಿವ್ಯ ಉಪಸ್ಥಿತರಿರುವರು. ಮಾಯಿಪ್ಪಾಡಿ ಅರಮನೆ ಆನುವಂಶಿಕ ಮೊತ್ತೇಸರರು ಶ್ರೀ ದಾನಮಾರ್ತಾಂಡ ವರ್ಮ ರಾಜ ಯಾನೆ ರಾಮಂತರಸುಗಳು XIII, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕನ್ಯಾನ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮಹಾಬಲೇಶ್ವರ ಭಟ್ ಎಡಕ್ಕಾನ ಗೌರವ ಉಪಸ್ಥಿತತರಿರುವರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾ‌ಗಿ ಹಲವು ಗಣ್ಯರು ಉಪಸ್ಥಿತರಿರುವರು.ಮಧ್ಯಾಹ್ನ1:00 ರಿಂದ ಶ್ರೀ ವೆಳ್ಳಿಕ್ಕೋತ್ ವಿಷ್ಣು ಭಟ್ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ನಡೆದು ಬಳಿಕ 2:30ರಿಂದ ಶ್ರೀ ಎಂ. ಎಸ್. ಗಿರಿಧರ್ ಮತ್ತು ಬಳಗ, ಬೆಂಗಳೂರು (ದೂರದರ್ಶನ ಕಲಾವಿದ ಸಂಗೀತ ನಿರ್ದೇಶಕರು) ದಾಸ ಸಂಕೀರ್ತನೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 4:00 ಗಂಟೆಗೆ ಪರಮಪೂಜ್ಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಶ್ರೀಮದ್‌ ಮಧ್ವಾಚಾರ್ಯ ಮೂಲಮಹಾಸಂಸ್ಥಾನಂ, ಅದಮಾರು ಮಠ, ಉಡುಪಿ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಗುರುದೇವದತ್ತ ಸಂಸ್ಥಾನ ಪೂರ್ಣಕುಂಭ ಸ್ವಾಗತ ನಡೆಯಲಿದೆ.ಸಂಜೆ 4:30 ಕ್ಕೆ ನಿಟ್ಟೆ ಡೀಮ್ಸ್ ವಿಶ್ವವಿದ್ಯಾನಿಲಯ ಕುಲಪತಿ, ಮಂಗಳೂರು ಲೆಮಿನಾ ಸಮೂಹ ಸಂಸ್ಥೆ ಅಧ್ಯಕ್ಷ ವಿನಯ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಶ್ರೀಮದ್‌ ಮಧ್ವಾಚಾರ್ಯ ಮೂಲಮಹಾಸಂಸ್ಥಾನಂ ಅದಮಾರು ಮಠ, ಉಡುಪಿ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀಕ್ಷೇತ್ರ ಒಡಿಯೂರು ಅಶೀರ್ವಚನ ನೀಡಲಿದ್ದಾರೆ. ಖ್ಯಾತ ಜ್ಯೋತಿಷ್ಯ ವಳಕುಂಜ ವೆಂಕಟರಮಣ ಭಟ್ ದಿವ್ಯ ಉಪಸ್ಥಿತರಿರುವರು. ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಹೊರನಾಡು ಧರ್ಮದರ್ಶಿ ಭೀಮೇಶ್ವರ ಜೋಷಿ ಗೌರವ ಉಪಸ್ಥಿತರಿರುವರು. ಅಖಿಲ ಭಾರತೀಯ ಪ್ರತಿನಿಧಿ ಸಭಾ ಅಮಂತ್ರಿತ ಸದಸ್ಯ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರಧಾನ ಭಾಷಣ ಮಾಡಲಿದ್ದಾರೆ. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾ‌ಗಿ ಹಲವು ಗಣ್ಯರು ಉಪಸ್ಥಿತರಿರುವರು.ರಾತ್ರಿ 7:30ಕ್ಕೆ ಮಧೂರು ಶ್ರೀ ಸಿದ್ಧಿವಿನಾಯಕ ಬಾಲಗೋಕುಲ ಮಕ್ಕಳಿಂದ ನೃತ್ಯ ವೈವಿಧ್ಯ ನಡೆದು ಬಳಿಕ ರಾತ್ರಿ 9:00ಕ್ಕೆ ವಿಧುಷಿ ಶ್ರೀಮತಿ ದೀಪಾ ಭಟ್, ನೃತ್ಯ ಕುಟೀರ, ಬೆಂಗಳೂರು ಇವರಿಂದ ಭರತನಾಟ್ಯ ನಡೆಯಲಿದೆ.

ದಿನಾಂಕ: 28-03-2025ನೇ ಶುಕ್ರವಾರ ಬೆಳಿಗ್ಗೆ 8.00ಕ್ಕೆ ಅರಣಿಯಲ್ಲಿ ಅಗ್ನಿ ಮಥನ, ಸಂಜೀವಿನೀ ಮಹಾಮೃತ್ಯುಂಜಯ ಯಾಗ, ಧಾರಾ೦ತ ಬಿಂಬ ಶುದ್ಧಿ ಪ್ರಕ್ರಿಯೆ, ಸಾಮಾನ್ಯ ಪ್ರಾಯಶ್ಚಿತ್ತ ಹೋಮಗಳು, ಸಾಮಾನ್ಯ ಶಾಂತಿ ಹೋಮ ನಡೆಯಲಿದೆ. ಸಂಜೆ 5.00ಕ್ಕೆ ಶ್ರೀ ದುರ್ಗಾನಮಸ್ಕಾರ ಪೂಜೆ, ಮಂಟಪ ಸಂಸ್ಕಾರ, ಅಂಕುರ ಪೂಜೆ ನಡೆಯಲಿದೆ. ಬೆಳಿಗ್ಗೆ8:00ಕ್ಕೆ ಡಾ. ಕೃಷ್ಣಪ್ರಸಾದ್ ದೇವಾಡಿಗ ಮತ್ತು ಬಳಗ, ಉಪ್ಪಿನಂಗಡಿ ಇವರಿಂದ ಸ್ಯಾಕ್ಸೋಫೋನ್ ನಡೆಯಲಿದೆ.ಬೆಳಿಗ್ಗೆ 10:00ಕ್ಕೆ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ, ಮಯಂಗರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಆಡಳಿತ ಟ್ರಸ್ಟಿ ಬಿ.ವಿ.ಕಕ್ಕಿಲ್ಲಾಯ ಬೇವಿಂಜೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿಪರಮಪೂಜ್ಯ ಶ್ರೀ ಯೋಗಿಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಶ್ರೀ ವಿಷ್ಣುಪ್ರಕಾಶ್ ಕಾವು ಪಟ್ಟೇರಿ, ಕಾವುಮಠ ದಿವ್ಯ ಉಪಸ್ಥಿತರಿರುವರು. ಕವಡಿಯಾರ್ ಅರಮನೆ, ತಿರುವನಂತಪುರ ರಾಮವರ್ಮರಾಜ, ಕಣಿಪುರ ಶ್ರೀ ಗೋಪಾಲಕೃಷ್ಣದೇವಸ್ಥಾನ ಪವಿತ್ರಪಾಣಿ ಡಾ.ವಿಕ್ರಂ ಇರ್ನೀರಾಯ, ಮೂಡುಬಿದಿರೆ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ ಆಳ್ವ ಗೌರವ ಉಪಸ್ಥಿತರಿರುವರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾ‌ಗಿ ಹಲವು ಗಣ್ಯರು ಉಪಸ್ಥಿತರಿರುವರು. ಮಧ್ಯಾಹ್ನ1:00 ಗಂಟೆಗೆ ಬಳ್ಳಪದವು ಶ್ರೀ ಯೋಗೀಶ ಶರ್ಮ ಮತ್ತು ಬಳಗ ಇವರಿಂದ ಸಂಗೀತಾರ್ಚನೆ ನಡೆದು ಬಳಿಕ 2:30ಕ್ಕೆ ಶ್ರೀ ವ್ಯಾಸರಾಜ ಕಡಬ ಇವರಿಂದ ಭಕ್ತಿಭಾವ ಜಾನಪದ ಹಾಡು ನಡೆಯಲಿದೆ. ಸಂಜೆ 4:30ಕ್ಕೆ ಮುಂಬೈ ಉದ್ಯಮಿ ಪ್ರವೀಣ್ ಭೋಜ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ ಶ್ರೀಸುಬ್ರಹ್ಮಣ್ಯ ಮಠ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕೇರಳ ಪೊಲೀಸ್ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಟಿ.ಪಿ.ಸೆನ್‌ಕುಮಾರ್ ಗೌರವ ಉಪಸ್ಥಿತರಿರುವರು. ಖ್ಯಾತ ಉಪನ್ಯಾಸಕ, ದೈವಜ್ಞರು ಪಂಜ ಭಾಸ್ಕರ ಭಟ್ ಪ್ರಧಾನ ಭಾಷಣ ಮಾಡಲಿದ್ದಾರೆ. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾ‌ಗಿ ಹಲವು ಗಣ್ಯರು ಉಪಸ್ಥಿತರಿರುವರು. ರಾತ್ರಿ 7:30ಕ್ಕೆ ಖ್ಯಾತ ಚಲನಚಿತ್ರನಟಿ ನವ್ಯಾ ನಾಯರ್ ಇವರಿಂದ ನೃತ್ಯಕಾರ್ಯಕ್ರಮ ನಡೆದು ಬಳಿಕ ರಾತ್ರಿ 9:00ಕ್ಕೆ ನಾಟ್ಯಮಂಟಪ ಮಧೂರು ಸ್ಕೂಲ್ ಆಫ್ ಫೈನ್ ಆರ್ಟ್ಸ್ ನೃತ್ಯ ನಿರ್ದೇಶನ – ಶ್ರೀಮತಿ ಸೌಮ್ಯಾ ಶ್ರೀಕಾಂತ್, ಮಧೂರು ಇವರಿಂದ ನಾಟ್ಯಾರ್ಚನೆ ನಡೆಯಲಿದೆ.ದಿನಾಂಕ: 29-03-2025ನೇ ಶನಿವಾರ ಬೆಳಿಗ್ಗೆ8:00ಕ್ಕೆ ಪೂರ್ಣ ನವಗ್ರಹ ಹೋಮ, ಅವಗಾಹ, ಸೇಕಬಿಂಬ ಶುದ್ದಿ ಪ್ರಕ್ರಿಯೆ, ವಿಶೇಷ ಪ್ರಾಯಶ್ಚಿತ್ತ ಹೋಮಗಳು, ವಿಶೇಷ ಶಾಂತಿ ಹೋಮಗಳು, ಅದ್ಭುತ ಶಾಂತಿ ಹೋಮ ನಡೆಯಲಿದೆ. ಸಂಜೆ5:00ಕ್ಕೆ ನವಶಕ್ತಿ ಹೋಮ, ಜೀವಕುಂಭಾಧಿವಾಸ, ಅಷ್ಟಬಂಧಾಧಿವಾಸ, ಉಪದೇವತಾ ಹಂಸರೂಪೀ ಸದಾಶಿವ ಹಾಗೂ ಕಾಶೀ ವಿಶ್ವನಾಥ ಲಿಂಗಾಧಿವಾಸ, ಅಧಿವಾಸ ಹೋಮಗಳು, ನಾಳ ಶೋಧನೆ ಮಡೆಯಲಿದೆ.ಬೆಳಿಗ್ಗೆ8:00ಕ್ಕೆ ವಿದ್ಯಾನಗರ ವಿಧುಷಿ ಶ್ರೀಮತಿ ಉಷಾ ಈಶ್ವರ್ ಭಟ್ ಹಾಗೂ ಬಳಗದವರಿಂದ ಸಂಗೀತ ಕಛೇರಿ ನಡೆಯಲಿದೆ. ಬೆಳಿಗ್ಗೆ 10:00ಕ್ಕೆ ಮ೦ಗಳೂರು ಶರವು ಶ್ರೀ ಮಹಾಗಣಪತಿ ದೇವಸ್ಥಾನ ಮೊಕ್ತೇಸರರು ರಾಘವೇಂದ್ರ ಶಾಸ್ತ್ರಿ ಶಿಲೆಶಿಲೆ ಇವರ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೂಡ್ಲು ವಿವೇಕಾನಂದ ನಗರ ಮಾತಾ ಅಮೃತಾನಂದಮಯೀ ಮಠ ಪರಮಪೂಜ್ಯ ಶ್ರೀ ವೇದವಿದ್ಯಾಮೃತ ಚೈತನ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಪ್ರಧಾನ ಅರ್ಚಕರು ಮತ್ತು ತಂತ್ರಿಗಳು ಬ್ರಹ್ಮಶ್ರೀ ಡಾ. ರಾಮಚಂದ್ರ ಅಡಿಗ ದಿವ್ಯ ಉಪಸ್ಥಿತರಿರುವರು. ಮಾಯಿಪ್ಪಾಡಿ ಅರಮನೆ ರಾಜೇಂದ್ರ ರಾವ್ ವಕೀಲ ಗೌರವ ಉಪಸ್ಥಿತರಿರುವರು. ಬೆಂಗಳೂರು ಯುವ ವಾಗ್ಮಿ ಕುಮಾರಿ ಹಾರಿಕಾ ಮಂಜುನಾಥ್ ಪ್ರಧಾನ ಭಾಷಣ ಮಾಡಲಿದ್ದಾರೆ. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾ‌ಗಿ ಹಲವು ಗಣ್ಯರು ಉಪಸ್ಥಿತರಿರುವರು.ಮಧ್ಯಾಹ್ನ 1:00ಕ್ಕೆ ರಾಗಸಂಗಮ ಆರ್ಕೆಸ್ಟ್ರಾ, ರತ್ನಾಕರ ಎಸ್ ಓಡಂಗಲ್ಲು, ಬದಿಯಡ್ಕ ಇವರಿಂದ ಭಕ್ತಿ ಝೇಂಕಾರ ನಡೆದು ಬಳಿಕ ಮಧ್ಯಾಹ್ನ 2:30ಕ್ಕೆ ಅಡೂರು ದುರ್ಗಾವಾಹಿನಿ ಮತ್ತು ಬಳಗದವರಿಂದ ನೃತ್ಯ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 4:30ಕ್ಕೆ ಶ್ರೀ ಮಹಾವಿಷ್ಣು ಕ್ಷೇತ್ರ, ಕುತ್ಯಾಳ ಮತ್ತು ಪುತ್ತೂರು ಕೋಟಿ ಚೆನ್ನಯ್ಯ ಕ್ಷೇತ್ರ ಮೊಕ್ತೇಸರರು ವಿನೋದ್ ಆಳ್ವ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀಮದ್ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀ ಶೀರೂರು ಮಠ ಉಡುಪಿ ಪರಮಪೂಜ್ಯ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ತಂತ್ರಿವರ್ಯರು ದಿವ್ಯ ಉಪಸ್ಥಿತರಿರುವರು. ಸನ್ಮಾನ್ಯ ರಾಜ್ಯ ಸಚಿವರು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ, ಕೇಂದ್ರ ಸರಕಾರ ಸುರೇಶ್ ಗೋಪಿ ಗೌರವ ಉಪಸ್ಥಿತರಿರುವರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾ‌ಗಿ ಹಲವು ಗಣ್ಯರು ಉಪಸ್ಥಿತರಿರುವರು.ರಾತ್ರಿ 7:30ಕ್ಕೆ ಪದ್ಮವಿಭೂಷಣ ಡಾ. ಪದ್ಮಾಸುಬ್ರಹ್ಮಣ್ಯಂ ಇವರಿಂದ ಭರತನಾಟ್ಯ ನಡೆದು ರಾತ್ರಿ 9:00ಕ್ಕೆ ರಾಧಿಕಾಸ್ ಅಕಾಡೆಮಿ, ಬೆಂಗಳೂರು ಇವರಿಂದ ನೃತ್ಯಾರ್ಚನೆ ನಡೆದು ಬಳಿಕ ರಾತ್ರಿ 10:00ಕ್ಕೆ ಮಿತ್ರಕಲಾವೃಂದ(ರಿ.) ಮಧೂರು, ಯುವಕೇಸರಿ ಮಧೂರು, ಸಂಘಶಕ್ತಿ ಮಧೂರು ಇವರ ಜಂಟಿ ನೇತೃತ್ವದಲ್ಲಿ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕರಿಂದ ಭಕ್ತಿ ರಸಮಂಜರಿ ನಡೆಯಲಿದೆ.

ದಿನಾಂಕ: 30-03-2025 ನೇ ಆದಿತ್ಯವಾರ ಬೆಳಿಗ್ಗೆ 9:00 ರಿಂದ ದಿವಾ ಗಂಟೆ 9:10ರ ಬಳಿಕ ಗಂಟೆ 11ರ ಒಳಗಿನ ರೇವತಿ ನಕ್ಷತ್ರ ತೃತೀಯ ಚರಣ ವೃಷಭ ಲಗ್ನ ಸುಮುಹೂರ್ತದಲ್ಲಿ ವಾಸ್ತು ಶಾಸ್ತ್ರರೀತ್ಯಾ ನವೀಕೃತ ಶ್ರೀ ಮಧೂರು ಕ್ಷೇತ್ರದ ಶ್ರೀಮದನಂತೇಶ್ವರ ದೇವರ ಪ್ರಾಸಾದಕ್ಕೆ ಶಿಖರ ಪ್ರತಿಷ್ಠೆ, ಶಿಖರ ಕಲಶಾಭಿಷೇಕ, ಅಷ್ಟಬಂಧ ಪ್ರತಿಷ್ಠೆ, ಜೀವಕುಂಭಾಭಿಷೇಕ, ಹಂಸರೂಪೀ ಸದಾಶಿವ ಹಾಗೂ ಕಾಶೀ ವಿಶ್ವನಾಥ ಉಪದೇವತಾ ಲಿಂಗ ಪ್ರತಿಷ್ಠೆ, ಪ್ರತಿಷ್ಠಾಕಲಶಾಭಿಷೇಕ ನಡೆಯಲಿದೆ. ಸಂಜೆ 5:00ರಿಂದ ಶ್ರೀದುರ್ಗಾ, ಸುಬ್ರಹ್ಮಣ್ಯ, ಶಾಸ್ತ್ರ, ಬಿಂಬಾಧಿವಾಸ, ವೀರಭದ್ರ ಅಧಿವಾಸ, ಅಧಿವಾಸ ಹೋಮಗಳು, ಹಂಸರೂಪೀ ಸದಾಶಿವ, ಕಾಶೀ ವಿಶ್ವನಾಥನ ಸನ್ನಿಧಿಯಲ್ಲಿ ಕಲಾಶಾಧಿವಾಸ ನಡೆಯಲಿದೆ. ಬೆಳಿಗ್ಗೆ 8 ರಿಂದ ಸುಗುಣಾ ಅಚಾರ್ಯ ಮತ್ತು ಕುಮಾರಿ ಸಮೀಕ್ಷಾ ಅಚಾರ್ಯ ಮತ್ತು ಕುಮಾರಿ ಸಮೀಕ್ಷಾ ಆಚಾರ್ಯ ಉಜಿರೆ ಇವರಿಂದ ಶಾಸ್ತ್ರೀಯ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಎಸ್‌.ಜಿ ಪ್ರಸಾದ್‌ ಕಾಸರಗೋಡು ಉಪಾಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಕೃಷ್ಣಾಪುರ ಜಗದ್ಗುರು ಶ್ರೀಮದ್‌ ಮಧ್ವಾಚಾರ್ಯ ಮೂಲಮಹಾಸಂಸ್ಥಾನಂ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಸಭೆಯಲ್ಲಿ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಮಧ್ಯಾಹ್ನ 12:30 ಭಕ್ತಿ ಸುಗಮ ಸಂಗೀತ – ಶ್ರೀ ಗೋಪಾಲಕೃಷ್ಣ ಕದ್ರಿ, ಮಂಗಳೂರು ಮಧ್ಯಾಹ್ನ 2:30 ಕ್ಕೆ ಭಕ್ತಿಗಾನ ಸುಧಾ – ಶ್ರೀಮತಿ ಮೀನಾಕುಮಾರಿ ವಿದ್ಯಾನಗರ, ಕಾಸರಗೋಡು ರಾತ್ರಿ ಗಂಟೆ 07:30 : ವಯೊಲಿನ್ – ಕುಮಾರಿ ಗಂಗಾ ಶಶಿಧರನ್, ಗುರುವಾಯೂರು, ತ್ರಿಶೂರು ರಾತ್ರಿ ಗಂಟೆ 09:00 : ಗೀತನರ್ತನ – ನೃತ್ಯರೂಪಕ, ಶಾಸ್ತ್ರೀಯ ನೃತ್ಯ ಕಲಾಕೇಂದ್ರ, ಮೂಡುಶೆಡ್ಡೆ, ಮಂಗಳೂರು ರಾತ್ರಿ ಗಂಟೆ 10:30 ಭರತನಾಟ್ಯಂ – ವಿಧುಷಿ ಶ್ರೀಮತಿ ರಮ್ಯಾ ಚಂದ್ರ, ನಟನ ಭರತನಾಟ್ಯ ಕೇಂದ್ರ, ಮಂಗಳೂರುಸಂಜೆ 4.30 ಕ್ಕೆ ಡಾ.ಕೆ ಎಸ್‌ ಕಾರಂತ ಅಧ್ಯಕ್ಷರು, ಆಡಳಿತ ಮಂಡಳಿ ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಪೀಠಾಧೀಶ್ವರರು, ಶ್ರೀಮತ್ ಜಗದ್ಗುರು ಅನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ, ಪಡುಕುತ್ಯಾರು ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ದಿನಾಂಕ: 31-03-2025 ನೇ ಸೋಮವಾರದಂದು ಬೆಳಿಗ್ಗೆ 9:00 ಪೂರ್ವಾಹ್ನ ಘಂಟೆ 9:10ರ ಬಳಿಕ 11:00 ಘಂಟೆಯ ಮಧ್ಯೆ ವೃಷಭಲಗ್ನ ಸುಮುಹೂರ್ತದಲ್ಲಿ ಶ್ರೀ ಧರ್ಮಶಾಸ್ತ, ದುರ್ಗಾ, ಸುಬ್ರಹ್ಮಣ್ಯ, ವೀರಭದ್ರ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಹಂಸರೂಪೀ ಸದಾಶಿವ, ಕಾಶಿ ವಿಶ್ವನಾಥ ಸನ್ನಿಧಿಯಲ್ಲಿ ಕಲಶಾಭಿಷೇಕ, ಶ್ರೀ ರುದ್ರಯಾಗ ಸಂಜೆ ಗಂಟೆ 05:00 : ಶ್ರೀ ಧರ್ಮಶಾಸ್ತ, ದುರ್ಗಾ, ಸುಬ್ರಹ್ಮಣ್ಯ, ವೀರಭದ್ರ ಕಲಾಶಾಧಿವಾಸ, ಅಧಿವಾಸ ಹೋಮಗಳು, ದಿಕ್ಷಾಲಹೋಮಗಳು, ಬಲಿಶಿಲಾ ಪ್ರತಿಷ್ಠೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಐ.ವಿ ಭಟ್‌ ವಕೀಲರು ಉಪಾಧ್ಯಕ್ಷರು ಶ್ರೀ ಬ್ರಹ್ಮಕಲಶೋತ್ಸವ ಸಮಿತಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ, ಶ್ರೀ ಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠ, ಗೋಕರ್ಣ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆವೂರು ಶುಭ ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ದಿವ್ಯ ಉಪಸ್ಥಿತರಿರುವರು. ಮುಂಬೈ ಉದ್ಯಮಿ ರಘುರಾಮ ಶೆಟ್ಟಿ ಕನ್ಯಾನ ಹಾಗೂ ಮಂಗಳೂರು ಶ್ರೀ ಸೋಮೇಶ್ವರ ದೇವಸ್ಥಾನ ಮೊಕ್ತೇಸರರು ರವೀಂದ್ರನಾಥ ಆಳ್ವ ಗೌರವ ಉಪಸ್ಥಿತರಿರುವರು. ಕೇರಳ ಹಿಂದು ಐಕ್ಯವೇದಿ ಕಾರ್ಯಾಧ್ಯಕ್ಷ ಶ್ರೀ ವತ್ಸನ್ ತಿಲ್ಲಂಕೇರಿ ಪ್ರಧಾನ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು: ಬೆಳಿಗ್ಗೆ 8:00ಕ್ಕೆ ಮಂಜುಳಾ ಹರಿಪ್ರಕಾಶ್ ಮತ್ತು ಬಳಗ, ಕಾಪು, ಇವರಿಂದ ಶಾಸ್ತ್ರೀಯ ಸಂಗೀತ ಮಧ್ಯಾಹ್ನ 2:30 ರಿಂದ ಶ್ರೀಮತಿ ಮಂಗಳಾ ಸುರೇಶ್, ಪಯ್ಯನ್ನೂರ್ ಇವರಿಂದ ಭಕ್ತಿ ಗಾನಾಮೃತರಾತ್ರಿ ಗಂಟೆ 07:30 : ಶ್ರೀಮತಿ ಸಿಂಧು ಭಾಸ್ಕರನ್, ನಾಟ್ಯಾಲಯಂ ಕಾಸರಗೋಡು ಶಿಷ್ಯರಿಂದ ನೃತ್ಯ ಸಿಂಚನ ರಾತ್ರಿ ಗಂಟೆ 09:00 : ಶ್ರೀ ಬಾಲಕೃಷ್ಣ ಮಾಸ್ಟರ್, ನೃತ್ಯ ನಿರ್ದೇಶಕರು, ನಾಟ್ಯನಿಲಯ, ಮಂಜೇಶ್ವರ ಇವರ ಶಿಷ್ಯರಿಂದ ಭರತನಾಟ್ಯ ನಡೆಯಲಿದೆ. ಸಂಜೆ 4.30 ಕ್ಕೆ ಎಂ ನಾರಾಯಣ ಭಟ್‌ ವಕೀಲರು ಕಾಸರಗೋಡು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಉದಿತ್ ಚೈತನ್ಯ ಸ್ವಾಮೀಜಿ, ಸಂಸ್ಥಾಪಕರು, ಭಾಗವತಂ ವಿಲೇಜ್ ಟ್ರಸ್ಟ್ ಆಶೀರ್ವಚನ ನೀಡಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಅನುವಂಶಿಕ ಮೊಕ್ತೇಸರರು ವೇದಮೂರ್ತಿ ಶ್ರೀ ಅನಂತ ಪದ್ಮನಾಭ ಅಸ್ರಣ್ಣ, ಮುಲ್ಲಪ್ಪಳ್ಳಿ ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿ ಪ್ರಾಂತ್ಯ ಅಧ್ಯಕ್ಷ ಕೃಷ್ಣನ್ ನಂಬೂದಿರಿ ದಿವ್ಯ ಉಪಸ್ಥಿತರಿರುವರು. ಮುಲ್ಕಿ ಶ್ರೀ ಹರಿಕೃಷ್ಣ ಪುನರೂರು ಧರ್ಮದರ್ಶಿ ಗೌರವ ಉಪಸ್ಥಿತರಿರುವರು.

ದಿನಾಂಕ: 1-4-2024ನೇ ಮಂಗಳವಾರ ಬೆಳಿಗ್ಗೆ8:00ಕ್ಕೆ ಶ್ರೀ ಧರ್ಮಶಾಸ್ತ, ದುರ್ಗಾ, ಸುಬ್ರಹ್ಮಣ್ಯ, ವೀರಭದ್ರ ಸನ್ನಿಧಿಯಲ್ಲಿ ಕಲಶಾಭಿಷೇಕ, ತತ್ವಹೋಮ, ತತ್ವಕಲಶಾಭಿಷೇಕ, ಚಂಡಿಕಾಯಾಗ ನಡೆದು ಸಂಜೆ ಗಂಟೆ 05:00 : ಭದ್ರಕಮಂಡಲ ಪೂಜೆ, ಪಂವಿಂಶತಿ ದ್ರವೈಮೀಳಿತ, ಸಹಸ್ರಕಲಶ ಸಹಿತ ಬ್ರಹ್ಮಕಲಶಾಧಿವಾಸ, ನವಕುಂಡಗಳಲ್ಲಿ ಅಧಿವಾಸ ಹೋಮಗಳು, ಮಹಾಗಣಪತಿ ದೇವರಿಗೆ 109 ಕಲಶ ಪ್ರತಿಷ್ಟೆ, ಅಧಿವಾಸ ಹೋಮ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮಗಳು:ಬೆಳಿಗ್ಗೆ 8:00ಕ್ಕೆ ವಿಧುಷಿ ರಾಧಾ ಮುರಳೀಧರ, ತಾಳಿಪಡ್ಪು, ಕಾಸರಗೋಡು ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.ಬೆಳಿಗ್ಗೆ10:00ಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್‌‌ ಶೆಟ್ಟಿ, ಮಲಾರ್‍ ಬೀಡು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ ಪರಮಪೂಜ್ಯ ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಲಿದ್ದಾರೆ. ಭಾರತ ಸರಕಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘನ ಉಪಸ್ಥಿತರಿರುವರು. ಶಕುಂತಳಾ ಯು ಟಿ ಆಳ್ವ ಉಳಿಪಾಡಿ ಗುತ್ತು ಗೌರವ ಉಪಸ್ಥಿತರಿರುವರು. ಕೇರಳ ಹಿಂದು ಐಕ್ಯವೇದಿ, ರಾಜ್ಯ ರಕ್ಷಾಧಿಕಾರಿ ಶಶಿಕಲಾ ಟೀಚರ್‍ ಪಟ್ಟಾಂಬಿ ಪ್ರಧಾನ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು: ಮಧ್ಯಾಹ್ನ 12:30ಕ್ಕೆ ಭಾಸ ಮಹಾಕವಿಯ “ಊರುಭಂಗಂ” ಎಂಬ ನಾಟಕವನ್ನು ಆಧರಿಸಿ ಶ್ರೀ ರಾಜನ್ ಮುಳಿಯಾರ್‍ ಸಮರ್ಪಿಸುವ ಏಕಪಾತ್ರಾಭಿನಯ “ಸುಯೋಧನಂ” ನಡೆಯಲಿದೆ. ಮಧ್ಯಾಹ್ನ 1:30ಕ್ಕೆ ನಾರಾಯಣ ಜೋಗಿ ಮತ್ತು ಸುರೇಶ್ ಜೋಗಿ, ಮಂಗಳೂರು ಇವರಿಂದ ಸ್ಯಾಕ್ಸೋಪೋನ್ ಕಾರ್ಯಕ್ರಮದ ಬಳಿಕ ಮಧ್ಯಾಹ್ನ3:00ಕ್ಕೆ ಗಂಗಾಧರ ಗಾಂಧಿ , ಮಂಗಳೂರು ಇವರಿಂದ ಗೀತಾಗಾಯನ ನಡೆಯಲಿದೆ. ಸಂಜೆ 4:30ಕ್ಕೆ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಬ್ರಿಗೇಡಿಯರ್ ಐ.ಎನ್. ರೈ ಇಚ್ಚಂಪಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಜಗದ್ಗುರು ಶ್ರೀಮದ್‌ ಮಧ್ವಾಚಾರ್ಯ ಮೂಲಮಹಾಸಂಸ್ಥಾನ, ಶ್ರೀ ಕಾಣಿಯೂರು ಮಠ, ಉಡುಪಿ ಆಶೀರ್ವಚನ ನೀಡಲಿದ್ದಾರೆ. ಕಂಬಾರು, ಮಾಜಿ ಕಾರ್ಯನಿರ್ವಹಣಾಧಿಕಾರಿ/ಸಲಹೆಗಾರರು, ಹುಡೋ, ಭಾರತ ಸರಕಾರ ಕೆ. ರವೀಂದ್ರ ಆಳ್ವ ಕೋಟಕುಂಜ ಗೌರವ ಉಪಸ್ಥಿತರಿರುವರು. ವಿಶ್ವ ಹಿಂದು ಪರಿಷತ್ ಕೇರಳ ಪ್ರಾಂತ್ಯ ಸಂಯೋಜಕ ಮಿನಿ ಹರಿಕುಮಾರ್ ಪ್ರಧಾನ ಭಾಷಣ ಮಾಡಲಿದ್ದಾರೆ.ಸಾಂಸ್ಕೃತಿಕ ಕಾರ್ಯಕ್ರಮಗಳು: ರಾತ್ರಿ 7:00ಕ್ಕೆ ‘ಕೃಷ್ಣಂ ವಂದೇ ಜಗದ್ಗುರುಮ್’ – ನೃತ್ಯ ನಾಟಕ – ನಾಟ್ಯನಿಕೇತನ, ಕೊಯಂಬತ್ತೂರ್ ನಡೆದು ರಾತ್ರಿ 9:00ಕ್ಕೆ ಶ್ವೇತಾ ನಾಗೇಶ್, ಚೆನ್ನೈ ಇವರಿಂದ ಕೂಚುಪ್ಪುಡಿ ನಡೆದು ಬಳಿಕರಾತ್ರಿ 10:00ಕ್ಕೆ ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ, ಪುತ್ತೂರು ಇವರಿಂದ ನೃತ್ಯರಂಜಿನಿ ನಡೆಯಲಿದೆ.

ದಿನಾಂಕ: 02-04-2025ನೇ ಬುಧವಾರ ಬೆಳಿಗ್ಗೆ ಗಂಟೆ 07:00 : ಬ್ರಹ್ಮಕಲಶಾಭಿಷೇಕ ಪ್ರಾರಂಭ, ಪೂರ್ವಾಹ್ನ 09:55ಕ್ಕೆ ಸರಿಯಾಗಿ ಒದಗುವ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮ ಕುಂಭಾಭಿಷೇಕ, ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮ ಕುಂಭಾಭಿಷೇಕ, ಅವಸ್ತುತ ಬಲಿ, ಮಹಾಮೂಡಪ್ಪ ಸೇವೆಯ ಪ್ರಾರ್ಥನೆ. ಧ್ವಜಾರೋಹಣ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಮಹಾಪೂಜೆ ಸಂಜೆ ಗಂಟೆ 06:00 : ಉತ್ಸವ ಬಲಿ, ಶ್ರೀ ಮಹಾಗಣಪತಿ ಮಂತ್ರಾನುಷ್ಠಾನ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು: ಬೆಳಿಗ್ಗೆ ಗಂಟೆ 08:00 ರಿಂದ ಶ್ರೀಮತಿ ರಮ್ಯಾಶ್ರೀ ಎ, ಕುಮಾರಮಂಗಲ ಮತ್ತು ಆದರ್ಶ್ ಅಂಬೆಕಾನ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಮಧ್ಯಾಹ್ನ 12:30 : ಶ್ರೀಮತಿ ಶಾಂಭವಿ ಪ್ರಾಣೇಶ್, ಬೆಂಗಳೂರು ಇವರಿಂದ ಹರಿಕಥಾ ಸತ್ಸಂಗಮಧ್ಯಾಹ್ನ 01:30 ಶ್ರೀಮತಿ ಉಷಾ ಹೆಬ್ಬಾರ್, ಮಣಿಪಾಲ ಇವರಿಂದ ದಾಸಗಾನಾಮೃತ ಮಧ್ಯಾಹ್ನ 02:30 : ಶ್ರೇಯಾ ಮೆಲೊಡೀಸ್, ಮಂಗಳೂರು ಇವರಿಂದ ಭಕ್ತಿ ರಸಮಂಜರಿ ರಾತ್ರಿ ಗಂಟೆ 07:30 ಶ್ರೀ ನಂದೀಶನ್ ಮತ್ತು ಬಳಗದವರಿಂದ ವಾದ್ಯ ಸಂಗಮಂ ರಾತ್ರಿ ಗಂಟೆ 09:00 : ನಾಟ್ಯ ನಿಕೇತನ ಕೊಲ್ಯ, ಮಂಗಳೂರು ಇವರಿಂದ ಭರತನಾಟ್ಯ ಬೆಳಗ್ಗೆ 10 ಗಂಟೆಗೆ ಸುಬ್ಬಯ್ಯ ರೈ, ವಕೀಲರು ಇಚ್ಲಂಪಾಡಿಗುತ್ತು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಶೀರ್ವಚನ ಪರಮಪೂಜ್ಯ ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ, ಪ್ರಾದೇಶಿಕ ಮುಖ್ಯಸ್ಥರು, ಚಿನ್ಮಯಾ ಮಿಷನ್, ಕಾಸರಗೋಡು ಇವರು ಆಶೀರ್ವಚನ ನೀಡಲಿದ್ದಾರೆ. ಸಂಜೆ 4.30 ಕ್ಕೆ ಕೆ ವಿಷ್ಣು ಭಟ್‌ ಕಕ್ಕೆಪ್ಪಾಡಿ, ಅಧ್ಯಕ್ಷರು ವೈದಿಕ ಸಮಿತಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಪರಮಪೂಜ್ಯ ಶ್ರೀಮದ್ ಸತ್‌ ಸ್ವರೂಪಾನಂದ ಸರಸ್ವತಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾರ್ಗದರ್ಶಕ ಮ೦ಡಳಿ ಶುಭ ಆಶೀರ್ವಚನ ನೀಡಲಿದ್ದಾರೆ. ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ದಿನಾಂಕ: 3-04-2025ನೇ ಗುರುವಾರ ಬೆಳಿಗ್ಗೆ ಗಂಟೆ 05:00 : ದೀಪದ ಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಶತರುದ್ರಾಭಿಷೇಕ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಮಹಾಮೂಡಪ್ಪ ಸೇವೆಯ ದ್ರವ್ಯಗಳ ಆಗಮನ, ದ್ರವ್ಯಪೂಜೆ ಸಂಜೆ ಗಂಟೆ 06:00 : ಉತ್ಸವ ಬಲಿ, ಶ್ರೀ ಮಹಾಗಣಪತಿ ಮಂತ್ರಾನುಷ್ಠಾನ ನಡೆಯಲಿದೆ. ಬೆಳಗ್ಗೆ 10.00 ಗಂಟೆಗೆ ಡಾ.ಎಂ ಬಿ ಪುರಾಣಿಕ್‌ ಇವರ ಅಧ್ಯಕ್ಷೆತಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ : ಪರಮಪೂಜ್ಯ ಶ್ರೀ ಅಮೃತಕೃಪಾನಂದಪುರಿ ಸ್ವಾಮೀಜಿ, ಮಾತಾ ಅಮೃತಾನಂದಮಯೀ ಮಠ, ಕೊಲ್ಲಂ ಶುಭ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ: ಬೆಳಿಗ್ಗೆ ಗಂಟೆ 08:00 : ಸಂಗೀತ ಸೇವೆ- ವಿಧುಷಿ ಸರಸ್ವತಿ ಕೃಷ್ಣನ್, ಕುಮಾರಮಂಗಲಮಧ್ಯಾಹ್ನ 12:30 : ಶ್ರೀ ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಇವರಿಂದ ದಾಸ ಭಕ್ತಿ ಸಂಕೀರ್ತನೆಮಧ್ಯಾಹ್ನ 02:00 :ವಿಧುಷಿ ಶ್ರೀಮತಿ ವಾಣಿಪ್ರಸಾದ್, ಸುನಾದ ಸಂಗೀತ ಶಾಲೆ, ಬದಿಯಡ್ಕ ಇವರ ಶಿಷ್ಯರಿಂದ ಶಾಸ್ತ್ರೀಯ ಸಂಗೀತರಾತ್ರಿ ಗಂಟೆ 07:30 : ವಿಧುಷಿ ಮಂಜುಳಾ ಸುಬ್ರಹ್ಮಣ್ಯ, ನಾಟ್ಯರಂಗ, ಪುತ್ತೂರು ಇವರಿಂದ ಭರತನಾಟ್ಯಂ ರಾತ್ರಿ ಗಂಟೆ 09:00 : ಪುತ್ತೂರು ಶ್ರೀ ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ (ವಿಶ್ವಬ್ರಾಹ್ಮಣ ಯುವಕ ಸಂಘ ಮಧೂರು ಇವರ ನೇತೃತ್ವದಲ್ಲಿ) ಭಕ್ತಿಗಾನ ರಸಮಂಜರಿ ಸಂಜೆ 4.30 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಅನಂತ್‌ ಕುಮಾರ್‌ ಉಪಾಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ ಇವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ರಾಜಶೇಖರಾನಂದ ಸ್ವಾಮೀಜಿ, ವಜ್ರದೇಹಿ ಮಠ, ಗುರುಪುರ ಇವರು ಆಶೀರ್ವಚನ ನೀಡಲಿದ್ದಾರೆ.ದಿನಾಂಕ: 04-04-2025ನೇ ಶುಕ್ರವಾರ ಬೆಳಿಗ್ಗೆ5:00ಕ್ಕೆ ದೀಪದ ಬಲಿ, ಶತರುದ್ರಾಭಿಷೇಕ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಮಹಾಮೂಡಪ್ಪ ಸೇವೆಯ ಅಕ್ಕಿ ಮುಹೂರ್ತ ನಡೆಯಲಿದೆ. ಸಂಜೆ 6:00ಕ್ಕೆ ನಡುದೀಪೋತ್ಸವ, ಸೇವೆ ಸುತ್ತುಗಳು, ಶ್ರೀ ಮಹಾಗಣಪತಿ ಮಂತ್ರಾನುಷ್ಠಾನ ನಡೆಯಲಿದೆ.

ಬೆಳಿಗ್ಗೆ 8:00ಕ್ಕೆ ಅರ್ಚನಾ ಗುಣಾಜೆ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಬೆಳಿಗ್ಗೆ ಗಂಟೆ 10:00 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪರಮಪೂಜ್ಯ ಬ್ರಹ್ಮಚಾರಿಣಿ ದಿಶಾ ಚೈತನ್ಯ, ಚಿನ್ಮಯಾ ಮಿಷನ್, ಕಾಸರಗೋಡು ದಿವ್ಯ ಉಪಸ್ಥಿತರಿರುವರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಖ್ಯ

- Advertisement -

Related news

error: Content is protected !!