Tuesday, June 9, 2026
spot_imgspot_img
spot_imgspot_img

ಮಂಗಳೂರು: ಬೈಕ್ ಮೇಲೆ ಉರುಳಿಬಿದ್ದ ಟೆಂಪೋ : ಸವಾರ ಸಾವು

- Advertisement -
- Advertisement -

ಮಂಗಳೂರು: ಬೈಕ್ ಮೇಲೆ ಟೆಂಪೊವೊಂದು ಉರುಳಿ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ತೆಂಕ ಉಳಿಪಾಡಿಯ ಬಾಮಿ ಶಾಲೆಯ ಸಮೀಪದ ಇಳಿಜಾರು ಪ್ರದೇಶದಲ್ಲಿ ನಡೆದಿದೆ.

ಸುಂಕದಕಟ್ಟೆಯ ಚಾವಂಡಿಪಲ್ಕೆ ನಿವಾಸಿ ಶ್ರೀನಿವಾಸ (54) ಮೃತರು.

ಮಧ್ಯಾಹ್ನ ಕೈಕಂಬದಿಂದ ಗುರುಪುರಕ್ಕೆ ಹೋಗುತ್ತಿದ್ದ ಖಾಲಿ ಟೆಂಪೊವೊಂದು ಹೆದ್ದಾರಿ ಬದಿಯ ಹೊಂಡದಲ್ಲಿ ಸಿಲುಕಿತ್ತು.ಈ ವೇಳೆ ಟೆಂಪೋ ಚಾಲಕ ಒಮ್ಮೆಲೇ ತೆಗೆಯುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ. ಈ ವೇಳೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬೈಕ್ ಟೆಂಪೋ ಅಡಿಯಲ್ಲಿ ಸಿಲುಕಿದ್ದು ಗಂಭೀರ ಗಾಯಗೊಂಡ ಶ್ರೀನಿವಾಸ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟೋತ್ತಿಗಾಗಲೇ ಶ್ರೀನಿವಾಸ್ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.

ಶ್ರೀನಿವಾಸ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾದಲ್ಲಿ ಲ್ಯಾಂಪ್ ಮೇಲ್ವಿಚಾರಕರಾಗಿ ಕೆಲಸಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ಬಜಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!