Friday, June 5, 2026
spot_imgspot_img
spot_imgspot_img

ತಲಕಾವೇರಿ ಗುಡ್ಡ ಕುಸಿತ ಪ್ರಕರಣ: 10 ದಿನಗಳ ಬಳಿಕ ಮತ್ತೊಂದು ಮೃತದೇಹ ಪತ್ತೆ

- Advertisement -
- Advertisement -

ಕೊಡಗು: ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 10 ದಿನಗಳ ಬಳಿಕ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವ ಹಿನ್ನಲೆ ಪೋಸ್ಟ್ ಮಾರ್ಟಂ ಬಳಿಕ ಗುರುತು ಸಿಗಬೇಕಿದೆ.

ಕಳೆದ ಕೆಲ ದಿನಗಳ ಹಿಂದೆ ನಾರಾಯಣ ಆಚಾರ್ ಹಾಗೂ ಅವರ ಸಹೋದರ ಆನಂದ ತೀರ್ಥ ಅವರ ಮೃತದೇಹ ಪತ್ತೆಯಾಗಿತ್ತು. ಇದೀಗ ಘಟನೆ ನಡೆದು 10 ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿವೆ. ನಾಪತ್ತೆಯಾಗಿರುವ ಇನ್ನಿಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

- Advertisement -

Related news

error: Content is protected !!