Friday, June 5, 2026
spot_imgspot_img
spot_imgspot_img

ಮೂರು ವರ್ಷದ ಹಿಂದೆ ನಡೆದ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

- Advertisement -
- Advertisement -

ಬ್ರಹ್ಮಾವರ: ವಿಶಾಲ ಗಾಣಿಗ ಕೊಲೆ ಪ್ರಕರಣದ ಆರೋಪಿ ಧರ್ಮೇಂದ್ರ ಕುಮಾರ್ ಸುಹಾನಿಯನ್ನು ಫೆ.2ರಂದು ಲಕ್ನೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಿಎಸ್‌ಐ ಮಧು ಬಿ ಮತ್ತು ಸಿಬ್ಬಂದಿಗಳಾದ ಶಾಂತರಾಜ್, ಸುರೇಶ ಬಾಬು ಬಂಧಿಸಿದ್ದಾರೆ.

ಧರ್ಮೇಂದ್ರ ಕುಮಾರ್ ಮೂರು ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ಗುತ್ತಿಗೆ ಹಂತಕ ಸ್ವಾಮಿನಾಥನ್ ನಿಶಾದ್ ಎಂಬಾತನಿಗೆ ವಿಶಾಲ ಗಾಣಿಗನ ಪತಿ ರಾಮಕೃಷ್ಣ ಎಂಬಾತನನ್ನು ಪರಿಚಯಿಸಿ, ವಿಶಾಲ ಗಾಣಿಗ ಕೊಲೆಗೆ ಸಹಕರಿಸಿದ ಆರೋಪ ಇವರ ಮೇಲಿದೆ.

ಜುಲೈ 2021 ರಲ್ಲಿ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಮ್ರಗೋಡು ಮಿಲನ ರೆಸಿಡೆನ್ಸಿಯಲ್ಲಿ ವಿಶಾಲಾ ಗಾಣಿಗ ಅವರನ್ನು ಕೊಲೆ ಮಾಡಲಾಗಿತ್ತು. ಆಕೆಯ ಪತಿ ರಾಮಕೃಷ್ಣ, ಸ್ವಾಮಿನಾಥನ್ ನಿಶಾದ್ ಮತ್ತು ರೋಹಿತ್ ರಾಣಾ ಪ್ರತಾಪ್ ಪ್ರಕರಣದ ಎಲ್ಲಾ ಆರೋಪಿಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಧರ್ಮೇಂದ್ರ ಕುಮಾರ್ ಅವರನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.

- Advertisement -

Related news

error: Content is protected !!