- Advertisement -
- Advertisement -



ಧಾರವಾಡ: ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಗ್ಯಾಸ್ ಗೀಸರ್‌ಗೆ ಅಳವಡಿಸಿದ್ದ ಸಿಲಿಂಡರ್ ಬ್ಲಾಸ್ಟ್ ಆಗಿ ಮೂವರು ಗಾಯಗೊಂಡಿದ್ದಾರೆ.
ಸಾಯಿರಾಬಾನು (54), ಇವರ ಮಕ್ಕಳಾದ ಅಬ್ಬಾಸ್ ಅಲಿ (29) ಮತ್ತು ಹಸನ್ (26) ಸಿಲಿಂಡರ್ ಸ್ಫೋಟದಿಂದ ಗಾಯಗೊಂಡವರು. ಇಂದು (ಜು.18) ಮುಂಜಾನೆ ಗ್ಯಾಸ್ ಸೋರಿಕೆಯಾದ ವಾಸನೆ ಬರುತ್ತಿತ್ತು. ಇದನ್ನು ಗಮನಿಸಿದ್ದ ಮನೆ ಮಾಲೀಕ ಅಲ್ಲಾಬಕ್ಷ್, ಬೇರೆ ಕಡೆ ಲೀಕ್ ಆಗುತ್ತಿರಬಹುದು ಎಂದು ನಮಾಜ್‌ಗೆ ಹೋಗಿದ್ದರು. ಅಷ್ಟರಲ್ಲಿ ಮನೆಯಲ್ಲಿದ್ದ ಒಬ್ಬ ಮಗ ಲೈಟ್ ಹಾಕಿದ್ದು, ತಕ್ಷಣ ಸಿಲಿಂಡರ್ ಬ್ಲಾಸ್ಟ್ ಆಗಿದೆ.
ಮೂವರು ಗಾಯಾಳುಗಳಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಚಲ್ಲಾಪಿಲ್ಲಿಯಾಗಿವೆ. ಸಿಲಿಂಡರ್ ಬ್ಲಾಸ್ಟ್ ಆದ ಹಿನ್ನೆಲೆ ಮನೆಯ ಒಂದು ಗೋಡೆ ಕೂಡಾ ಒಡೆದು ಹೋಗಿದೆ. ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
- Advertisement -








