Thursday, June 18, 2026
spot_imgspot_img
spot_imgspot_img

ವಿಟ್ಲ : ನೃತ್ಯದ ಮೂಲಕ ಮನರಂಜಿಸುತ್ತಿದ್ದ ಸುಂದರ ಕಲ್ಲೆಂಚಿಪಾದೆ ಇನ್ನಿಲ್ಲ

- Advertisement -
- Advertisement -

ವಿಟ್ಲ : ವಿಟ್ಲದಲ್ಲಿ ಯಾವುದೇ ಕಾರ್ಯಕ್ರಮ ಇರಲಿ ತನ್ನ ನೃತ್ಯದ ಮೂಲಕ ಮನರಂಜಿಸುತ್ತಿದ್ದಸದಾ ಹಸನ್ಮುಖಿಯಾಗಿದ್ದ ಸುಂದರ ಕಲ್ಲೆಂಚಿಪಾದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸದಾ ಹಸನ್ಮುಖಿಯಾಗಿದ್ದ ಸುಂದರ ರವರು ಪಿಲಿಕುಣಿತ, ಜಾನಪದ ಹಾಡುಗಳ ಮೂಲಕ ವಿಟ್ಲ ಪರಿಸರದ ಜನರಿಗೆ ಸದಾ ಮನರಂಜನೆ ನೀಡುತ್ತಿದ್ದರು.

ಕೆಲದಿನಗಳ ಹಿಂದೆ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿನ್ನೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ತಂದೆ,ತಾಯಿ, ಇಬ್ಬರು ಸಹೋದರಿ, ಓರ್ವ ಸಹೋದರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

- Advertisement -

Related news

error: Content is protected !!